ಮೈಸೂರಿನಲ್ಲಿ ಪುಂಡ ಯುವಕರ ಅಟ್ಟಹಾಸ: ವೀಲಿಂಗ್ ಮಾಡುತ್ತ ಸ್ಕೂಟರ್ ಗೆ ಡಿಕ್ಕಿ : ಶಿಕ್ಷಕಿಗೆ ಗಂಭೀರ ಗಾಯ.. ಮೈಸೂರು,ಜುಲೈ,20,2023(..): ಮೈಸೂರಿನಲ್ಲಿ ಪುಂಡ ಯುವಕರ ಅಟ್ಟಹಾಸ ಮುಂದುವರೆದಿದ್ದು,. ವೀಲಿಂಗ್ ಮಾಡುತ್ತಾ ಶಿಕ್ಷಕಿಯ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. 18ನೆ ತಾರೀಖುನಂದು ಈ ಘಟನೆ ನಡೆದಿದೆ. ಶಿಕ್ಷಕಿ ಶಾಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ತ್ರಿಬಲ್ ರೈಡಿಂಗ್ ಮೂಲಕ ವೀಲಿಂಗ್ ಮಾಡುತ್ತಾ ಬಂದ ಯುವಕರು ಶಿಕ್ಷಕಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದಾರೆ. ಗಾಯತ್ರಿ ಪುರಂ ಚರ್ಚ್ ಬಳಿ ಕೆಟಿಎಂ ಬೈಕ್ ನಲ್ಲಿ ಬಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಾಯವಾಗಿ ರಕ್ತಸ್ರಾವವಾಗಿ ಶಿಕ್ಷಕಿ ಪ್ರಜ್ಞೆ ತಪ್ಪಿದ್ದು, ರಕ್ತದ ಮಡುವಿನಲ್ಲಿದ್ದ ಶಿಕ್ಷಕಿಯನ್ನು ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಿದರು. ಶಿಕ್ಷಕಿ ತೀವ್ರನಿಗಾ ಘಟಕದಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು ಸಿದ್ದಾರ್ಥ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : – - - –