ಜಿಂಕೆ ಮಾಂಸ ಸಾಗಣೆ: ಅರಣ್ಯಾಧಿಕಾರಿಗಳಿಂದ ಕಾಡುಗಳ್ಳರಿಬ್ಬರ ಬಂಧನ. ಹನೂರು,ಜುಲೈ,20,2023(..): ಜಿಂಕೆ ಮಾಂಸ ಸಾಗಣೆ ಮಾಡುತ್ತಿದ್ದ ಇಬ್ಬರು ಕಾಡುಗಳ್ಳರನ್ನ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಹನೂರು ತಾಲ್ಲೂಕಿನ ರಾಮಾಪುರ ಗ್ರಾಮದ ಕೃಷ್ಣಮೂರ್ತಿ ಮತ್ತು ಓರ್ವ ಬಾಲಕ ಬಂಧಿತ ಆರೋಪಿಗಳು. ಅರಣ್ಯ ಪ್ರದೇಶಕ್ಕೆ ಅತಿಕ್ರಮ ಪ್ರವೇಶಿಸಿ ಜಿಂಕೆಯನ್ನ ಬೇಟೆಯಾಡಿ ಕೊಂದು ಮಾಂಸ ಸಾಗಿಸುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಕೌದಳ್ಳಿ ವಲಯ ಅರಣ್ಯಾಧಿಕಾರಿ ಸುಂದರ್ ನೇತೃತ್ವದಲ್ಲಿ ದಾಳಿ ನಡೆಸಿ ಇಬ್ಬರನ್ನ ಬಂಧಿಸಿದ್ದಾರೆ. ಜಿಂಕೆ ಬೇಟೆಗೆ ಬಳಸಿದ್ದ ಪರಿಕರಗಳ ವಶಕ್ಕೆ ಪಡೆಯಲಾಗಿದ್ದು, ರಾಮಾಪುರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಬಂಧಿತ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. : - – - - .