ಪ್ರತಿಭಟನೆ ವೇಳೆ ಸುಸ್ತಾಗಿ ಕುಸಿದು ಬಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್: ಆಸ್ಪತ್ರೆಗೆ ರವಾನೆ.. ಬೆಂಗಳೂರು,ಜುಲೈ,19,2023(..): ಇಂದು ವಿಧಾನಸಭಾ ಕಲಾಪದಲ್ಲಿ ಅಗೌರವ ತೋರಿದ್ದಕ್ಕೆ ಸ್ಪೀಕರ್ 10 ಬಿಜೆಪಿ ಶಾಸಕರನ್ನ ಅಮಾನತುಗೊಳಿಸಿದ್ದನ್ನ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸ್ವಸ್ಥರಾದ ಘಟನೆ ನಡೆದಿದೆ. ಅಮಾನತಾದ 10 ಬಿಜೆಪಿ ಶಾಸಕರನ್ನ ಮಾರ್ಷಲ್ ಗಳು ಸದನದಿಂದ ಹೊತ್ತೊಯ್ದರು. ಈ ವೇಳೆ ಬಿಜೆಪಿ ಸದಸ್ಯರು ಪ್ರತಿಭಟನೆಗೆ ಮುಂದಾದರು. ಈ ಸಮಯದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಪಿ ಹೆಚ್ಚಾಗಿ ಸುಸ್ತಾಗಿ ಅಲ್ಲೆಯೇ ಮಲಗಿದ್ದಾರೆ. ಈ ವೇಳೆ ಯತ್ನಾಳ್ ಗೆ ವೈದ್ಯರು ಚಿಕಿತ್ಸೆ ನೀಡಿದ್ದು ಬಳಿಕ ಆ್ಯಂಬುಲೆನ್ಸ್ ನಲ್ಲಿ ಅವರನ್ನ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಬಿಜೆಪಿ 10 ಶಾಸಕರ ಅಮಾನತು ವಿರೋಧೀಸಿ ಬಿಜೆಪಿ ಪ್ರತಿಭಟನೆ ಮುಂದುವರೆದಿದೆ. : - - - – - ..