ರಾಜ್ಯ ಕಾಂಗ್ರೆಸ್ ವರ್ಗಾವಣೆ ದಂಧೆ ಮೂಲಕ ಹಣ ಸಂಗ್ರಹಿಸಿ ಹೈಕಮಾಂಡ್ ​ಗೆ ಕಳಿಸಲಿದೆ-ಮಾಜಿ ಸಚಿವ ಆರ್.ಅಶೋಕ್ ಆರೋಪ. ಬೆಂಗಳೂರು,ಜುಲೈ,19,2023(..):ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ ವರ್ಗಾವಣೆ ದಂಧೆ ಮೂಲಕ ಹಣ ಸಂಗ್ರಹಿಸಿ ಹೈಕಮಾಂಡ್ ​ಗೆ ಕಳಿಸಲಿದೆ ಎಂದು ಮಾಜಿ ಸಚಿವ ಆರ್​.ಅಶೋಕ್ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ವಿಪಕ್ಷಗಳು ಮಾಡಿಕೊಂಡ ಗುಂಪಿಗೆ ಇಂಡಿಯಾ ಎಂದು ಹೆಸರಿಟ್ಟಿದೆ. ಅದು ಇಂಡಿಯಾ ಅಲ್ಲ ಈಸ್ಟ್​ ಇಂಡಿಯಾ ಕಂಪನಿ ಇದ್ದಂತೆ. ಮುಂದೆ ನಡೆಯಲಿರುವ ಚುನಾವಣೆಗೆ ರಾಜ್ಯ ಕಾಂಗ್ರೆಸ್ ವರ್ಗಾವಣೆ ದಂಧೆ ಮೂಲಕ ಹಣ ಸಂಗ್ರಹಿಸಿ ಹೈಕಮಾಂಡ್​ಗೆ ಕಳಿಸಲಿದೆ ಎಂದು ಕಿಡಿಕಾರಿದರು. : - - –-- - .