ಯಾರು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಾನೆ ಅವನು ದೇಶಭಕ್ತ –ಸಚಿವ ಹೆಚ್ ಕೆ ಪಾಟೀಲ್ ನುಡಿ. ಬೆಂಗಳೂರು,ಜುಲೈ,18,2023(..):ಯಾರು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಾನೆ ಅವನು ದೇಶಭಕ್ತನಾಗಿರುತ್ತಾನೆ ಎಂದು ಸಚಿವ ಹೆಚ್.ಕೆ ಪಾಟೀಲ್ ನುಡಿದರು. ಇಂದು ಸದನದಲ್ಲಿ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್, ಮುಂದಿನ ದಿನಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಸುಧಾರಣೆ ತರುತ್ತೇವೆ. ಸರಿಯಾಗಿ ತೆರಿಗೆ ಸಂಗ್ರಹ ಆಗಬೇಕು. ಯಾರು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಾನೆ ಅವನು ದೇಶಭಕ್ತ. ದೇಶ ಕಟ್ಟಲು ತೆರಿಗೆ ಕಟ್ಟೋರಿಗೆ ಸಲಾಮ್ ಹೇಳ ಬೇಕು. ತೆರಿಗೆ ಕಛೇರಿಯಲ್ಲಿ ಟ್ಯಾಕ್ಸ್ ಕಟ್ಟೋರಿಗೆ ಗೌರವ ಕೊಡಬೇಕು ಎಂದು ಹೇಳಿದರು. : - - – - -