ವಂಡರ್‌ ಲಾದಲ್ಲಿ ಬುಧವಾರವೂ ಸಿಗಲಿದೆ ಶೇ.25ರಷ್ಟು ರಿಯಾಯಿತಿ. ಬೆಂಗಳೂರು,ಜುಲೈ,18,2023(..): ಮನರಂಜನಾ ಪ್ರಿಯರಿಗಾಗಿ ವಂಡರ್‌ ಲಾ ಇದೀಗ ಬುಧವಾರ ಕೂಡ ವಿಶೇಷ ಕೊಡುಗೆಯನ್ನು ಘೋಷಿಸಿದೆ. ಹೌದು, ಪ್ರತಿ ಬುಧವಾರ ಪಾರ್ಕ್‌ ನ ಪ್ರವೇಶ ಟಿಕೆಟ್‌ ಗಳ ಮೇಲೆ ಶೇ.25 ರಷ್ಟು ರಿಯಾಯಿತಿ ಘೋಷಿಸಿದ್ದು, ಆನ್‌ ಲೈನ್‌ ನಲ್ಲಿ ಬುಕ್‌ ಮಾಡುವ ಮೊದಲ 1000 ಟಿಕೆಟ್‌ ಗಳ ಮೇಲೆ ಈ ಕೊಡುಗೆ ಅನ್ವಯವಾಗಲಿದೆ. ಆನ್‌ ಲೈನ್‌ ನಲ್ಲಿ ಟಿಕೆಟ್‌ ಖರೀದಿದಾರರಿಗೆ ಈ ಆಫರ್‌ ನ ಅನುಭವ ಸಿಗಲಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಟಿಕೆಟ್‌ ಗಳನ್ನು ಕಾಯ್ದಿರಿಸಲು ಅನುವು ಮಾಡಿಕೊಡುತ್ತದೆ. ವಿಶೇಷ ಕೊಡುಗೆಯು ವಂಡರ್ಲಾ – ಬೆಂಗಳೂರು, ಹೈದರಾಬಾದ್ ಮತ್ತು ಕೊಚ್ಚಿಯ ಎಲ್ಲಾ ಮೂರು ಪಾರ್ಕ್‌ ಗಳಲ್ಲಿ ಆನ್‌ ಲೈನ್ ಟಿಕೆಟ್‌ಗಳಿಗೆ ಮಾತ್ರ ಮಾನ್ಯವಾಗಿರಲಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಂಡರ್‌ ಲಾ ಹಾಲಿಡೇಸ್ ಲಿಮಿಟೆಡ್‌ ನ ವ್ಯವಸ್ಥಾಪಕ ನಿರ್ದೇಶಕ ಅರುಣ್, ಪ್ರತಿ ಬುಧವಾರದಂದು ಈ ವಿಶೇಷ ರಿಯಾಯಿತಿ ನೀಡಿರುವುದು ಸಾಕಷ್ಟು ಜನರಿಗೆ ಅನುಕೂಲವಾಗಲಿದ್ದು, ವಾರದ ಮಧ್ಯದದಲ್ಲೂ ವಂಡರ್‌ ಲಾದಲ್ಲಿ ಮನರಂಜನೆ ಪಡೆಯಲು ಸಾಧ್ಯವಾಗಲಿದೆ. ಈ ಅದ್ಭುತ ಕೊಡುಗೆಯು ನಿಷ್ಠಾವಂತ ಪೋಷಕರಿಗೆ ಧನ್ಯವಾದ ಸಲ್ಲಿಸುವ ಒಂದು ಮಾರ್ಗವಾಗಿದೆ ಎಂದು ಹೇಳಿದರು. ವಂಡರ್‌ ಲಾ ತಮ್ಮ ಆನ್‌ ಲೈನ್ ಪೋರ್ಟಲ್ ://../. ಮೂಲಕ ತಮ್ಮ ಪ್ರವೇಶ ಟಿಕೆಟ್‌ ಗಳನ್ನು ಮುಂಚಿತವಾಗಿ ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ://..//-25-----. ಗೆ ಭೇಟಿ ನೀಡಿ ಅಥವಾ ಕರೆ ಮಾಡಿ: ಬೆಂಗಳೂರು: +91 80372 30333, +91 80350 73966 ಹೈದರಾಬಾದ್: 0841 4676333, +91 91000 63636 ಕೊಚ್ಚಿ: 0484-3514001, 7593853107 : 25% – – – .