ಕೇವಲ 2 ತಿಂಗಳಲ್ಲಿ 500 ಕೋಟಿಗೂ ಹೆಚ್ಚು ವಹಿವಾಟು: ಸರ್ಕಾರದ ವಿರುದ್ಧ ಮತ್ತೆ ಗಂಭೀರ ಆರೋಪ ಮಾಡಿದ ಹೆಚ್.ಡಿಕೆ. ಬೆಂಗಳೂರು,ಜುಲೈ,17,2023(..):ರಾಜ್ಯ ಸರ್ಕಾರದ ವಿರುದ್ದ ವರ್ಗಾವಣೆ ಬಾಂಬ್ ಸಿಡಿಸಿದ್ಧ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಇದೀಗ ಮತ್ತೆ ಗಂಭೀರ ಆರೋಪ ಮಾಡಿದ್ದಾರೆ. ಕೇವಲ 2 ತಿಂಗಳಲ್ಲಿ ವರ್ಗಾವಣೆಯಲ್ಲೇ 500 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ. ವರ್ಗಾವಣೆ ದಂಧೆ ಬಗ್ಗೆ ಓರ್ವ ಅಧಿಕಾರಿ ನನಗೆ ಮಾಹಿತಿ ನೀಡಿದ್ದಾರೆ. ಈ ಮಟ್ಟಕ್ಕೆ ವರ್ಗಾವಣೆ ದಂಧೆ ನಡೆದರೆ ಕರ್ನಾಟಕ ಉಳಿಯುತ್ತಾ ಎಂದು ​ ಸರ್ಕಾರದ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, . ನನ್ನ ಕಾಲದಲ್ಲಿ ವರ್ಗಾವಣೆಯಲ್ಲಿ ಕೋಟಿ ಕೋಟಿ ಹಣ ಪಡೆದಿದ್ದಾರೆ ಅಂತ ನನ್ನ ಮೇಲೆ ದಾಖಲೆ ಬಿಡುಗಡೆ ಮಾಡುತ್ತಿರಾ. ಒಂದು ವೇಳೆ ನನ್ನ ಕಾಲದಲ್ಲಿ ವರ್ಗಾವಣೆಗೆ ಲಂಚ ಪಡೆದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದರು. ಪಂಚರತ್ನ ಜಾರಿ ಮಾಡದಿದ್ದರೆ ಪಕ್ಷ ವಿಸರ್ಜನೆ ಮಾಡ್ತೇನೆ ಎಂದಿದ್ದೆ ಮಹಾಘಟಬಂಧನ್​ ಸಭೆಗೆ ಕಾಂಗ್ರೆಸ್​​ ಹಲವು ಪಕ್ಷಗಳ ನಾಯಕರಿಗೆ ಆಹ್ವಾನಿಸಿದ್ದಾರೆ. 123 ಸ್ಥಾನ ಬರದಿದ್ದರೆ ಜೆಡಿಎಸ್​​​ ವಿಸರ್ಜನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಪಂಚರತ್ನ ಯೋಜನೆ ಜಾರಿಗೆ ಒಂದು ಅವಕಾಶ ಕೊಡಿ ಎಂದು ಕೇಳಿದ್ದೆ. ಪಂಚರತ್ನ ಜಾರಿ ಮಾಡದಿದ್ದರೆ ಪಕ್ಷ ವಿಸರ್ಜನೆ ಮಾಡ್ತೇನೆ ಎಂದಿದ್ದೆ ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ತಿಳಿಸಿದರು. : 500 - -2 - – – .