ಜೀವದ ಹಂಗು ತೊರೆದು ತನ್ನ ಸಹೋದರನ ಪ್ರಾಣ ರಕ್ಷಿಸಿದ 8 ವರ್ಷದ ಬಾಲಕಿ.. ತುಮಕೂರು,ಜುಲೈ,14,2023(..):ಜೀವದ ಹಂಗು ತೊರೆದು 8 ವರ್ಷದ ಬಾಲಕಿ ತನ್ನ ಸಹೋದರನ) ಜೀವ ರಕ್ಷಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ತಾಲೂಕಿನ ಕುಚ್ಚಂಗಿಯಲ್ಲಿ ಈ ಘಟನೆ ನಡೆದಿದೆ. ಬಾವಿಗೆ ಬಿದ್ದಿದ್ದ ತಮ್ಮ ಹಿಮಾಂಶುನನ್ನು ಸಹೋದರಿ ಶಾಲೂ ರಕ್ಷಿಸಿದ್ದಾಳೆ. ಉತ್ತರ ಪ್ರದೇಶ ಮೂಲದ ಜೀತೇಂದ್ರ, ರಾಜಕುಮಾರಿ ದಂಪತಿ ಕುಚ್ಚಂಗಿಯಲ್ಲಿನ ತೋಟದ ಮನೆಯಲ್ಲಿ ಕೆಲಸಕ್ಕೆ ಇದ್ದಾರೆ. ದಂಪತಿಗೆ ಶಾಲೂ(8), ಹಿಮಾಂಶು(7), ರಾಶಿ(3), ಹಾಗೂ ಕಪಿಲ್(2) ಎಂಬ ನಾಲ್ಕು ಮಕ್ಕಳಿದ್ದಾರೆ. ನಿನ್ನೆ ಹಿಮಾಂಶು ಹಾಗೂ ರಾಶಿ ತೋಟದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಬಾವಿಗೆ ಬಿದ್ದ ಚೆಂಡು ತೆಗೆಯಲು‌ ಹೋಗಿ ಹಿಮಾಂಶು ಬಾವಿಯಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದನು. ಇದನ್ನ ನೋಡಿದ ಸಹೋದರಿ ಶಾಲೂ ಲೈಫ್ ಜಾಕೀಟ್ ಧರಿಸಿ ಬಾವಿಗೆ ಜಿಗಿದಿದ್ದಾಳೆ. ಇದೇ ವೇಳೆ ಶಾಲೂ ಸಹಾಯಕ್ಕೆ ಅಕ್ಕಪಕ್ಕದ ಜನರು ದೌಡಾಯಿಸಿದ್ದು, ನಂತರ ಸ್ಥಳೀಯರು ಬಾವಿಯಿಂದ ಇಬ್ಬರನ್ನು ಮೇಲಕ್ಕೆ ಎತ್ತಿದ್ದಾರೆ. ಶಾಲೂ ಕಳೆದ ಮೂರ್ನಾಲ್ಕು ತಿಂಗಳಿನಿಂದ ಮನೆ ಮಾಲೀಕ ಧನಂಜಯ್ಯ ಬಳಿ ಈಜು ಕಲಿಯುತ್ತಿದ್ದಳು. ಈಜು ಕಲಿಯುವ ವೇಳೆ ಲೈಫ್ ಜಾಕೀಟ್ ಧರಿಸುತ್ತಿದ್ದಳು. ಇದೀಗ 8 ವರ್ಷದ ಬಾಲಕಿ ಶಾಲೂ ಸಾಹಸವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ. : 8-- - -’- -