ಕಾಂಗ್ರೆಸ್ ನವರಿಗೇಕೆ ಇಷ್ಟು ಆತುರ..? ಸಮಯ ಬಂದಾಗ ಪೆನ್ ಡ್ರೈವ್ ಬಿಡುಗಡೆ- ಮಾಜಿ ಸಿಎಂ ಹೆಚ್.ಡಿಕೆ. ಬೆಂಗಳೂರು,ಜುಲೈ,13,2023(..):ಕಾಂಗ್ರೆಸ್ ನವರಿಗೇಕೆ ಇಷ್ಟು ಆತುರ..? ಸಮಯ ಬಂದಾಗ ಪೆನ್ ಡ್ರೈವ್ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕುಟಕಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಪೆನ್​ಡ್ರೈವ್ ಖಾಲಿ ಇಲ್ಲ, ಈ ಪೆನ್​ಡ್ರೈವ್ ಬೇರೆಯದ್ದು. ದಾಖಲೆ ಕೊಡಿ ಅಂದರೆ ದುಡ್ಡು ಕೊಡಲು ಸಾಧ್ಯವಾ? ಈ ಪೆನ್​ಡ್ರೈವ್​​​ ಆಪರೇಷನ್ ಮಾಡಿದ ಸಿಡಿ ರೀತಿ ಅಲ್ಲ. ಪೆನ್​ಡ್ರೈವ್​ ಬಿಡುಗಡೆಗೆ ಕಾಂಗ್ರೆಸ್ ​​ನವರಿಗೆ ಯಾಕೆ ಇಷ್ಟು ಆತುರ? ಇವರ ಸಮಸ್ಯೆ ಬಗ್ಗೆ ಎಲ್ಲವನ್ನೂ ಬಿಚ್ಚಿಟ್ಟಿದ್ದೇನೆ, ಸಲಹೆ ನೀಡಿದ್ದೇನೆ. ಸರಿಪಡಿಸಿಕೊಳ್ಳುವುದಾದರೆ ಸರಿಪಡಿಸಿಕೊಳ್ಳಲಿ ಎಂದು ಹೇಳಿದರು. ಕಾಂಗ್ರೆಸ್ಸಿಗರು ಇನ್ನೂ ಕೆಲ ವಿಕೆಟ್ ಬೀಳಲಿ ಅಂತಾ ಹೇಳುತ್ತಿದ್ದಾರೆ. ನಾನು ಪ್ರಚೋದನೆಗೆ ಒಳಗಾಗಲ್ಲ ಎಂದು ಹೆಚ್.ಡಿಕೆ ತಿಳಿಸಿದರು. : - -- - ..