ಪ್ರತಿ ಇಲಾಖೆಯಲ್ಲೂ ರೇಟ್ ಕಾರ್ಡ್: ಕಾಂಗ್ರೆಸ್ ಸರ್ಕಾರದ ವರ್ಗಾವಣೆ ಕರಾಳ ದಂಧೆ ಬಯಲು-ಮಾಜಿ ಸಚಿವ ಆರ್.ಅಶೋಕ್. ಬೆಂಗಳೂರು,ಜುಲೈ,13,2023(..):ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎರಡೇ ತಿಂಗಳ ಅವಧಿಯಲ್ಲಿ ವರ್ಗಾವಣೆಯ ಕರಾಳ ದಂಧೆ ಬಯಲಾಗಿದೆ. ಪ್ರತಿ ಇಲಾಖೆಯಲ್ಲೂ ರೇಟ್ ಕಾರ್ಡ್ ಇದೆ ಎಂದು ಮಾಜಿ ಸಚಿವ ಆರ್.ಅಶೋಕ್ ಆರೋಪಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಆರ್.ಅಶೋಕ್, ಬುಧವಾರ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ದರ ಪಟ್ಟಿ ಬಿಡುಗಡೆಗೂ ಮುನ್ನ ನನಗೆ ಅದನ್ನು ತೋರಿಸಿದ್ದರು. ಕೃಷಿ ಇಲಾಖೆಯಲ್ಲಿ ಈ ರೀತಿಯ ದರ ಪಟ್ಟಿ ನಿಗದಿಯಾಗಿದೆ ಅಂತ ತೋರಿಸಿದ್ದರು ಎಂದರು. ಎರಡೇ ತಿಂಗಳಲ್ಲಿ ವರ್ಗಾವಣೆಯ ಕರಾಳ ದಂಧೆ ಬಯಲಾಗಿದೆ. ನನಗೆ ಕುಮಾರಸ್ವಾಮಿ ಆ ದಾಖಲೆ ತೋರಿಸಿದರು. ಅದನ್ನು ಸದನದಲ್ಲಿ ತೋರಿಸಿದರೆ ಗಲಾಟೆ ಆಗುತ್ತೆ ಅಂತ ಅವರು ತೋರಿಸಲಿಲ್ಲ. ಹಾಗಾಗಿ ಅದನ್ನು ಸರ್ಕಾರಕ್ಕೆ, ಸಿಎಂಗೆ ಕೊಟ್ಟಿದ್ದಾರೆ ಎಂದು ಅಶೋಕ್ ತಿಳಿಸಿದರು. : – –- –- . .