ಸಚಿವ ಪ್ರಿಯಾಂಕ್ ಖರ್ಗೆ ಬಹಳ ನೈತಿಕ ಹಾಗೂ ಬಹಳ ಪ್ರಾಮಾಣಿಕ ವ್ಯಕ್ತಿ-ಲೇವಡಿ ಮಾಡಿದ ಅಶ್ವಥ್ ನಾರಾಯಣ್. ಬೆಂಗಳೂರು,ಜುಲೈ,12,2023(..):ಇಂದು ವಿಧಾನಸಭೆ ಕಲಾಪದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮಾಜಿ ಸಚಿವ ಅಶ‍್ವಥ್ ನಾರಾಯಣ್ ನಡುವೆ ವಾಗ್ವಾದ , ಮಾತಿನ ಸಮರ ನಡೆಯಿತು. ಸದನದಲ್ಲಿ ಮಾತನಾಡಿದ ಅಶ್ವಥ್ ನಾರಾಯಣ್, ಪ್ರಿಯಾಂಕ್ ಖರ್ಗೆ ಬಹಳ ನೈತಿಕ ಹಾಗೂ ಬಹಳ ಪ್ರಾಮಾಣಿಕ ವ್ಯಕ್ತಿ ಎಂದು ಲೇವಡಿ ಮಾಡಿದರು. ಈ ವೇಳೆ ಅಶ್ವತ್ಥ್​ ನಾರಾಯಣಗೆ ಟಾಂಗ್​ ಕೊಟ್ಟ ಪ್ರಿಯಾಂಕ್​ ಖರ್ಗೆ, ಮೈಸೂರು ಸಂಸದರು ವಿಸಿ ನೇಮಕಕ್ಕೆ ಹಣ ಕೊಟ್ಟು ಬರ್ತಾರೆ ಎಂದರು. ಹಿಂದಿನ ಸರ್ಕಾರದಲ್ಲಿ ಭ್ರಷ್ಟಾಚಾರ ಬಗ್ಗೆ ಅವರ ಸಂಸದರೇ ಹೇಳಿದ್ದಾರೆ ಎಂದು ತಿರುಗೇಟು ಕೊಟ್ಟರು. : - – - - – .