ಪೊಲೀಸರ ವಿರುದ್ದವೇ ದೂರು ನೀಡಿದ ಮಾಜಿ ಶಾಸಕ ಸುರೇಶ್ ಗೌಡ… ಮಂಡ್ಯ,ಜುಲೈ,13,2023(..):ಕೆಎಸ್ ​ಆರ್​ಟಿಸಿ ಚಾಲಕ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗೆ ಸಾಗಿಸುವ ವೇಳೆ ಆಂಬುಲೆನ್ಸ್ ತಡೆದ ವಿಡಿಯೋ ವೈರಲ್ ಆದ ವಿಚಾರ ಸಂಬಂಧ ಪೊಲೀಸರ ವಿರುದ್ದವೇ ಮಾಜಿ ಶಾಸಕ ಸುರೇಶ್ ಗೌಡ ದೂರು ನೀಡಿದ್ದಾರೆ. ನಾಗಮಂಗಲ ಟೌನ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ವಿರುದ್ದ ದಕ್ಷಿಣ ವಲಯ ಐಜಿಪಿ, ಮಂಡ್ಯ ಎಸ್ ಪಿ, ನಾಗಮಂಗಲ ಡಿವೈಎಸ್ ಪಿಗೆ ದೂರು ನೀಡಿದ್ದಾರೆ. ಆ್ಯಂಬುಲೆನ್ಸ್ ತಡೆದ ಸಿಸಿ ಟಿವಿ ದೃಶ್ಯಾವಳೀ ನೀಡಿದ್ದಾರೆ. ಯಾವ ಮಾನದಂಡದ ಆಧಾರದ ಮೇಲೆ ದೃಶ್ಯ ನೀಡಿದ್ದಾರೆ ಇದರಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದೆ . ಇನ್ಸ್ ಪೆಕ್ಟರ್ ಮತ್ತು ಪಿಎಸ್ ಐ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಸುರೇಶ್ ಗೌಡ ದೂರು ನೀಡಿದ್ದಾರ ಎನ್ನಲಾಗಿದೆ. : - – - – .