ಹೆಚ್ಚುವರಿ ಅಕ್ಕಿ ಬದಲು ಹಣ : ಸರ್ಕಾರಕ್ಕೆ ಸಲಹೆಯೊಂದನ್ನ ನೀಡಿದ ಮಾಜಿ ಸಿಎಂ ಹೆಚ್.ಡಿಕೆ. ಬೆಂಗಳೂರು,ಜುಲೈ,12,2023(..):5ಕೆಜಿ ಹೆಚ್ಚುವರಿ ಅಕ್ಕಿಗೆ ಹಣ ನೀಡುವ ಬದಲು ಬೇಳೆ, ಎಣ್ಣೆ, ಬೆಲ್ಲ ವಿತರಿಸಿ ಎಂದು ರಾಜ್ಯ ಸರ್ಕಾರಕ್ಕೆ ನೀಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಲಹೆ ನೀಡಿದರು. ವಿಧಾನಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಿದ ಹೆಚ್​​.ಡಿ.ಕುಮಾರಸ್ವಾಮಿ, ‘ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಗೆ‌ ಕೊರತೆ ಇದೆ. ಸಮಸ್ಯೆ ಬಗೆಹರಿಯುವವರೆಗೆ ಬೇಳೆ, ಎಣ್ಣೆ, ಬೆಲ್ಲ ವಿತರಿಸಬಹುದು ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಸಲಹೆ ನೀಡಿದರು. ಹಾಗೆಯೇ ‘5 ಗ್ಯಾರಂಟಿ ಮೇಲೆ ಕಾಂಗ್ರೆಸ್ ಗೆದ್ದಿದೆಯೆಂದು ವಿಶ್ಲೇಷಣೆ ಮಾಡುತ್ತಾರೆ. ಆದರೆ, ಅದಕ್ಕೆ ನಾನು ಮಹತ್ವ ಕೊಡಲ್ಲ. ಯಾವ ನಿರೀಕ್ಷೆ ಇಟ್ಟುಕೊಂಡು ಜನ ಮತ ಕೊಟ್ಟಿದ್ದಾರೆ ಗೊತ್ತಾಗುತ್ತೆ ಎಂದು ಹೆಚ್.ಡಿಕೆ ತಿಳಿಸಿದರು. : - – - – - – .