ಕುಲು ಮನಾಲಿ ಪ್ರವಾಸಕ್ಕೆ ಹೋಗಿದ್ದ ಮೈಸೂರು ಪ್ರವಾಸಿಗರು ನಾಪತ್ತೆ.. ಮೈಸೂರು,ಜುಲೈ11,2023(..):ಕುಲು ಮನಾಲಿ ಪ್ರವಾಸಕ್ಕೆ ಹೋಗಿದ್ದ ಪ್ರವಾಸಿಗರು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಪ್ಯಾಕೇಜ್ ಟೂರ್‌ ನಲ್ಲಿ ಮೈಸೂರಿನ ಪ್ರವಾಸಿಗರು ಪ್ರವಾಸಕ್ಕೆ ತೆರಳಿದ್ದರು ಶ್ರೀನಿಧಿ, ನವ್ಯ,ವೀರ್ ಹಾಗೂ ಅವರ ಪತ್ನಿ ಮೈಸೂರಿನಿಂದ ತೆರಳಿದ್ದರು. ಕಳೆದ ಗುರುವಾರ ಮೈಸೂರಿನಿಂದ ಹೊರಟಿದ್ದರು. ರಾಜ್ಯಾದ್ಯಂತ 50ಕ್ಕೂ ಹೆಚ್ಚು ಜನರು ಇವರ ಜೊತೆ ತೆರಳಿದ್ದರು ಎನ್ನಲಾಗಿದೆ. ಭಾನುವಾರ ರಾತ್ರಿ ಕೊನೆಯ ಬಾರಿಗೆ ಸಂಪರ್ಕಕ್ಕೆ ಸಿಕ್ಕಿದ್ದ ಅವರು, ಮಳೆ ಜಾಸ್ತಿ ಇದೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ. ನಾವು ಕೊಠಡಿಯಲ್ಲಿ ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದರು. ಅದಾದ ನಂತರ ಇದುವರೆಗೂ ಯಾರೊಬ್ಬರ ಬಗ್ಗೆಯೂ ಮಾಹಿತಿ ಇಲ್ಲ. ಹೀಗಾಗಿ ಈ ಬಗ್ಗೆ ಅವರ ಮನೆಯವರು ಆತಂಕಗೊಂಡಿದ್ದು, ಕುಟುಂಬಸ್ಥರ ಬಗ್ಗೆ ಮಾಹಿತಿ ನೀಡಿ ಸುರಕ್ಷಿತವಾಗಿ ಕರೆತರುವಂತೆ‌ ಮನವಿ ಮಾಡಿದ್ದಾರೆ. ಆದರೆ ಸಂಬಂಧಿಕರಿಗೆ ಯಾವ ಟ್ರ್ಯಾವಲ್ಸ್ ಅಂತಲೂ ಸಮರ್ಪಕ ಮಾಹಿತಿ ಇಲ್ಲ. : – – - – .