ರೈತರೊಂದಿಗೆ ಗದ್ದೆಗಿಳಿದು ನಾಟಿ ಮಾಡಿ ಖುಷಿಪಟ್ಟ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಸೋನಿಪತ್,ಜುಲೈ8,2023(..):ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ರೈತರೊಂದಿಗೆ ಭತ್ತದ ಗದ್ದೆಗಿಳಿದು ನಾಟಿ ಮಾಡಿ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಕೃಷಿಯಲ್ಲಿ ತೊಡಗಿದರು. ಇಂದು ಬೆಳಗ್ಗೆ ದೆಹಲಿಯಿಂದ ಶಿಮ್ಲಾಗೆ ತೆರಳುತ್ತಿದ್ದ ರಾಹುಲ್ ಗಾಂಧಿ ಹರಿಯಾಣದ ಸೋನಿಪತ್​​​ನ ಮದೀನಾ ಗ್ರಾಮದಲ್ಲಿ ಭತ್ತದ ನಾಟಿ ಮಾಡುತ್ತಿದ್ದ ರೈತರೊಂದಿಗೆ ಗದ್ದೆಗಿಳಿದು ನಾಟಿ ಮಾಡಿದರು. ಗದ್ದೆಯೊಂದರಲ್ಲಿ ಭತ್ತ ನಾಟಿಯಾಗುತ್ತಿರುವುದನ್ನು ಕಂಡ ಕಾಂಗ್ರೆಸ್‌ ಮುಖಂಡ ಕಾರನ್ನು ನಿಲ್ಲಿಸಿದರು. ಗದ್ದೆಗೆ ತೆರಳಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ರೈತರೊಂದಿಗೆ ಸೇರಿ ಭತ್ತ ನಾಟಿ ಮಾಡಿದರು .ಹೊಲದಲ್ಲಿ ರೈತರು, ಕೂಲಿಕಾರರೊಂದಿಗೆ ರಾಹುಲ್​ ಗಾಂಧಿ ಸಂವಾದ ನಡೆಸುತ್ತಿದ್ದ ದೃಶ್ಯವೂ ಕಂಡು ಬಂದಿತು. ಮುಂಬರುವ ಲೋಕಸಭಾ ಚುನಾವಣೆಗೆ ಈಗಾಗಲೇ ತಯಾರಿ ನಡೆಸುತ್ತಿರುವ ರಾಹುಲ್​ ಗಾಂಧಿ ಸಮಾಜದಲ್ಲಿ ವಿವಿಧ ಹಂತದ ಜನರೊಂದಿಗೆ ಬೆರತು ಸಮಸ್ಯೆ ಆಲಿಸುತ್ತಿದ್ದಾರೆ. ಇತ್ತೀಚೆಗಷ್ಟೆ ದೆಹಲಿಯ ಕರೋಲ್​ ಬಾಗ್​ ಪ್ರದೇಶದಲ್ಲಿ ಮೆಕ್ಯಾನಿಕಲ್​ ಕಾರ್ಯಾಗಾರಕ್ಕೆ ಭೇಟಿ ನೀಡಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದ್ದರು. : - – – .