ಗೋಹತ್ಯೆ ಕಾಯ್ದೆ ಹಿಂಪಡೆಯುತ್ತೇವೆ ಎಂದು ನಾವು ಹೇಳಿಲ್ಲ- ಸಚಿವ ಕೆ.ವೆಂಕಟೇಶ್ ಸ್ಪಷ್ಟನೆ. ಬೆಂಗಳೂರು,ಜುಲೈ,5,2023(..):ಗೋಹತ್ಯೆ ಕಾಯ್ದೆ ಹಿಂಪಡೆಯುತ್ತೇವೆ ಎಂದು ನಾವು ಹೇಳಿಲ್ಲ ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಸ್ಪಷ್ಟನೆ ನೀಡಿದರು. ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ವಿಚಾರ ಕುರಿತು ನಿಲುವು ಸ್ಪಷ್ಟಪಡಿಸುವಂತೆ ಆಗ್ರಹಿಸಿ ಬಿಜೆಪಿ ಸದಸ್ಯರು ವಿಧಾನಪರಿಷತ್ ನಲ್ಲಿ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಗೋಹತ್ಯೆ ಬಗ್ಗೆ ಅರ್ಧ ಗಂಟೆ ಚರ್ಚೆಗೆ ಮನವಿ ನೀಡಿ. ಪರಿಶೀಲಿಸಿ ಅವಕಾಶ ನೀಡುತ್ತೇವೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಹೀಗಾಗಿ ಬಿಜೆಪಿ ಸದಸ್ಯರು ಪರಿಷತ್‌ ನಲ್ಲಿ ಪ್ರತಿಭಟನೆ ಹಿಂಪಡೆದರು. ಈ ವೇಳೆ ಮಾತನಾಡಿದ ಸಚಿವ ಕೆ.ವೆಂಕಟೇಶ್, ಗೋಹತ್ಯೆ ಕಾಯ್ದೆಯನ್ನು ಹಿಂಪಡೆಯುತ್ತೇವೆಂದು ನಾವು ಹೇಳಿಲ್ಲ. ಗೋಹತ್ಯೆ ಕಾಯ್ದೆ ಬಗ್ಗೆ ಪಕ್ಷದ ಒಳಗಡೆ ಚರ್ಚೆ ನಡೆಯುತ್ತಿದೆ. ಗೋಹತ್ಯೆ ಬಗ್ಗೆ ದಾಖಲೆ ಏನಾದ್ರೂ ಇದ್ರೆ ನೀಡಲಿ ಎಂದರು. : – - -- .