ರಾಜ್ಯ ಸರ್ಕಾರ 2013-23ರ ಅವಧಿಯ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಲಿ- ಮಾಜಿ ಸಿಎಂ ಬೊಮ್ಮಾಯಿ ಆಗ್ರಹ. ಬೆಂಗಳೂರು,ಜುಲೈ,5,2023(..):ರಾಜ್ಯ ಸರ್ಕಾರ ನಿಜವಾಗಲೂ ಭ್ರಷ್ಟಾಚಾರದ ವಿರುದ್ದವಾಗಿದ್ದರೇ 2013-23ರ ಅವಧಿಯ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಒಂದುವರೆ ವರ್ಷದಿಂದ ನಮ್ಮ ವಿರುದ್ಧ 40% ಕಮಿಷನ್ ಆರೋಪ ಮಾಡುತ್ತಿದ್ದಾರೆ . ಆದರೆ ಇಲ್ಲಿವರೆಗೂ ಈ ಬಗ್ಗೆ ಯಾವುದೇ ದಾಖಲೆ ನೀಡಿಲ್ಲ. 40% ಕಮಿಷನ್ ಬಗ್ಗೆ ತನಿಖೆ ಮಾಡಿದ್ರೆ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಆಗಲಿ ಎಂದರು. ನಮ್ಮ ವಿರುದ್ದ ಆರೋಪ ಮಾಡುವ ರಾಜ್ಯ ಕಾಂಗ್ರೆಸ್ ಸರ್ಕಾರ ನಿಜವಾಗಲೂ ಭ್ರಷ್ಟಾಚಾರದ ವಿರುದ್ದವಾಗಿದ್ದರೇ 2013 -23 ರ ಅವಧಿಯ ಭ‍್ರಷ್ಟಾಚಾರದ ಬಗ್ಗೆ ತನಿಖೆ ಮಾಡಲಿ ಎಂದು ಬೊಮ್ಮಾಯಿ ಸವಾಲು ಹಾಕಿದರು. : - – – 2013-23- -