ಸಾಲಬಾಧೆ ತಾಳಲಾರದೆ ಸೆಲ್ಫಿ ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ ಮೈಸೂರು,ಆಗಸ್ಟ್,26,2024 (..):ಸಾಲಬಾಧೆ ತಾಳಲಾರದೆ ವ್ಯಕ್ತಿ ಸೆಲ್ಫಿ ವಿಡಿಯೋ ಮಾಡಿ ಕೆರೆಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಸುಂಡವಾಳು ಗ್ರಾಮದಲ್ಲಿ ನಡೆದಿದೆ. ಕೃಷ್ಣಾಚಾರಿ (28) ಮೃತಪಟ್ಟ ವ್ಯಕ್ತಿ. ಕೃಷ್ಣಾಚಾರಿ ಖಾಸಗಿ ಸಂಸ್ಥೆ ಹಾಗೂ ಕೈ ಸಾಲ ಮಾಡಿಕೊಂಡಿದ್ದ. ಸಾಲಗಾರರ ಒತ್ತಡದಿಂದ, ಸಾಲ ತೀರಿಸಲಾಗದೆ ಮನನೊಂದಿದ್ದ ಕೃಷ್ಣಾಚಾರಿ ಎಗ್ಗೆರೆ ಕೆರೆ ಮುಂದೆ ನಿಂತು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೆರೆ ಬಳಿ ಕೃಷ್ಣಾಚಾರಿಯ ಮೊಬೈಲ್ ಹಾಗೂ ಚಪ್ಪಲಿ ದೊರೆತಿದೆ. ತಾನು ಸಾಯುತ್ತಿರುವುದಾಗಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ನೇಹಿತರೊಬ್ಬರಿಗೂ ಸಹ ಮೊಬೈಲ್ ನಲ್ಲಿ ತಿಳಿಸಿದ್ದಾರೆಂದು ಹೇಳಲಾಗಿದೆ. ಒಟ್ಟು 20 ಲಕ್ಷ ರೂ. ಸಾಲ ಇತ್ತೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಸ್ಥಳಕ್ಕೆ ಪಿರಿಯಾಪಟ್ಟಣ ಠಾಣಾ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. : , , , ,