ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ನಮ್ಮಂತಹವರಿಗೆ ಮಾದರಿಯಾಗಲಿ- ಮಾಜಿ ಸಚಿವ ಸಾ.ರಾ ಮಹೇಶ್ ಮೈಸೂರು,ಅಕ್ಟೋಬರ್,4,2024 (..):ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ನಮ್ಮಂತಹವರಿಗೆ ಮಾದರಿಯಾಗಲಿ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಆಗ್ರಹಿಸಿದರು. ಇಂದು ಮೈಸೂರಿನಲ್ಲಿ ಮಾತನಾಡಿದ ಸಾ.ರಾ ಮಹೇಶ್, ನಿನ್ನೆ ಜಿ. ಟಿ ದೇವೇಗೌಡರು ಮಾತನಾಡಿರುವುದನ್ನು ನೋಡಿದ್ದೇನೆ. ಅದು ಅವರ ವೈಯುಕ್ತಿಕ ಅಭಿಪ್ರಾಯ. ಪಕ್ಷದ ಅಭಿಪ್ರಾಯವೇ ಬೇರೆ. ಕುಮಾರಸ್ವಾಮಿ ವಿರುದ್ಧ ತನಿಖೆ ಮಾಡುತ್ತಿರುವುದು ರಾಜ್ಯದ ತನಿಖಾ ಸಂಸ್ಥೆ. ಕುಮಾರಸ್ವಾಮಿ ಪ್ರಭಾವ ಬೀರಲು ಸಾಧ್ಯವೇ ಇಲ್ಲ. ಆದರೆ ಸಿಎಂ ವಿರುದ್ಧ ತನಿಖೆ ಮಾಡುತ್ತಿರುವುದು ಅವರ ಕೈಕೆಳಗಿರುವ ಸಂಸ್ಥೆ. ಹೀಗಾಗಿ ಅವರು ರಾಜೀನಾಮೆ ಕೊಡಬೇಕು. ರಾಜೀನಾಮೆ ಕೊಟ್ಟು ನಮ್ಮಂತಹವರಿಗೆ ಮಾದರಿಯಾಗಲಿ ಎಂದರು. ಜಿ.ಟಿ ದೇವೇಗೌಡರು ಪ್ರತಿಭಟನೆಗೆ ಗೈರು: ವ್ಯಂಗ್ಯವಾಗಿ ಉತ್ತರ ನೀಡಿದ ಸಾ ರಾ ಮಹೇಶ್ ಜಿ ಟಿ ದೇವೇಗೌಡರು ಇಂದಿನ ಪ್ರತಿಭಟನೆಗೆ ಗೈರಾದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಾ.ರಾ ಮಹೇಶ್, ಅವರು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರು. ರಾಜ್ಯ ಸುತ್ತಾಡಿ ಪಕ್ಷ ಕಟ್ಟುವ ಜವಾಬ್ದಾರಿ ಇದೆ. ಹೀಗಾಗಿ ಬಂದಿಲ್ಲ ಎಂದು ಸಾ ರಾ ಮಹೇಶ್ ವ್ಯಂಗ್ಯವಾಗಿ ಉತ್ತರ ನೀಡಿದರು. ಸಿದ್ದರಾಮಯ್ಯ ಮೇಲೆ ಜಿ ಟಿ ದೇವೇಗೌಡರಿಗೆ ದಿಢೀರ್ ಪ್ರೀತಿ ಹುಟ್ಟಿರುವ ವಿಚಾರ, ಈ ಪ್ರಶ್ನೆಯನ್ನು ಅವರಿಗೇ ಕೇಳಿ. ಈ ಬಗ್ಗೆ ಪ್ರತಿಕ್ರಿಯಿಸಲು ನಾನು ರಾಂಗ್ ಪರ್ಸನ್ ಎಂದು ಸಾ. ರಾ ಮಹೇಶ್ ತಿಳಿಸಿದರು. : , , , .