ಗೃಹ ಜ್ಯೋತಿ ಯೋಜನೆ: ಸರ್ವರ್ ಸಾಮರ್ಥ್ಯ ಜಾಸ್ತಿ ಮಾಡಿದ್ದೇವೆ- ಸಚಿವ ಕೆ.ಜೆ ಜಾರ್ಜ್. ಬೆಂಗಳೂರು,ಜೂನ್,27,2023(..):ಗೃಹ ಜ್ಯೋತಿ ಯೋಜನೆಗೆ ಅರ್ಜಿ ಹಾಕಲು ಸರ್ವರ್ ಸಾಮರ್ಥ್ಯ ಜಾಸ್ತಿ ಮಾಡಿದ್ದೇವೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ತಿಳಿಸಿದರು. ಇಂದು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಕೆ.ಜೆ ಜಾರ್ಜ್, ಗೃಹ ಜ್ಯೋತಿ ವೆಬ್ ಸೈಟ್ ತಾಂತ್ರಿಕ ಸಮಸ್ಯೆ ಸರಿ ಮಾಡಿದ್ದೇವೆ. ವೆಬ್ ಸೈಟ್ ಕ್ರ್ಯಾಶ್ ಬಗ್ಗೆ ಗೊತ್ತಾಗಿದೆ. ಸರ್ವರ್ ಸಾಮರ್ಥ್ಯ ಜಾಸ್ತಿ ಮಾಡಿದ್ದೇವೆ. 10 ಲಕ್ಷ ಅರ್ಜಿ ಸ್ವೀಕಾರ ಸಾಮರ್ಥ್ಯ ಸರ್ವರ್ ಇದೆ ಎಂದರು. ಬಿಜೆಪಿ ಕಾಲದ ಹಗರಣಗಳ ತನಿಖೆ ವಿಚಾರವಾಗಿ ಮಾತನಾಡಿದ ಅವರು, ದೂರು ಇನ್ನೂ ಬಂದಿಲ್ಲ, ಬಂದರೆ ತನಿಖೆ ಮಾಡುತ್ತೇವೆ. ಇಲಾಖೆಯ ಪರಿಶೀಲನೆ ಸಭೆಯಲ್ಲಿ ಒಂದು ಹಗರಣದ ಬಗ್ಗೆ ಗೊತ್ತಾಗಿದೆ. ಅದನ್ನು ತನಿಖೆ ಮಾಡಲು ಎಸಿಎಸ್​ಗೆ ನೀಡಲಾಗಿದೆ. ತನಿಖೆ ಪೂರ್ಣಗೊಂಡ ನಂತರ ಸತ್ಯಾಂಶವ ಗೊತ್ತಾಗಲಿದೆ ಎಂದು ಸಚಿವ ಕೆ.ಜೆ ಜಾರ್ಜ್ ತಿಳಿಸಿದರು. : – –- - - .