ನರೇಂದ್ರ ಮೋದಿ ಮೆಂಟಲಿ ವೀಕ್, ಅತ್ಯಂತ ದುರ್ಬಲ ಪ್ರಧಾನಿ- ಸಚಿವ ಆರ್.ಬಿ ತಿಮ್ಮಾಪುರ. ಬಾಗಲಕೋಟೆ,ಜೂನ್,26,2023(..):ನರೇಂದ್ರ ಮೋದಿ ಮೆಂಟಲಿ ವೀಕ್ ಆಗಿದ್ದಾರೆ. ದೇಶದಲ್ಲಿ ಇಷ್ಟೊಂದು ದುರ್ಬಲ ಪ್ರಧಾನಿ ಅಂದ್ರೆ ಮೋದಿ ಒಬ್ಬರೇ ಎಂದು ಸಚಿವ ಆರ್.ಬಿ ತಿಮ್ಮಾಪುರ ಲೇವಡಿ ಮಾಡಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್.ಬಿ ತಿಮ್ಮಾಪುರ, ಮೋದಿ ಅತ್ಯಂತ ದುರ್ಬಲ ಪ್ರಧಾನಿ. ಮೋದಿ ಎಂದಾದ್ರೂ ಪ್ರೆಸ್ ಮೀಟ್ ಮಾಡಿದ್ದಾರಾ..? ಯಾವತ್ತಾದ್ದರೂ ಪತ್ರಕರ್ತರನ್ನ ಎದುರಿಸಿದ್ದಾರಾ..? ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವ ಶಕ್ತಿ ಮೋದಿಗಿಲ್ಲ. ಸದನದಲ್ಲಿ ವಿಪಕ್ಷಗಳ ನಾಯಕರಿಗೂ ಉತ್ತರ ನೀಡಲ್ಲ ಎಂದು ಟೀಕಿಸಿದರು. ಮೋದಿ ಅವರು ಸಾಧನೆ ಮಾಡಿದ್ದಾರೆ ಎನ್ನುತ್ತಾರೆ. ಅದಾನಿ ಅಂಬಾನಿ ಸಾಲಮನ್ನಾ ಮಾಡಿದ್ದು ಮೋದಿ ಸಾಧನೆಯಾ…? ಎಂದು ಸಚಿವ ತಿಮ್ಮಾಪುರ ಪ್ರಶ್ನಿಸಿದರು. : - - - – - .