ದಂಪತಿ ಮೇಲೆ ಹಲ್ಲೆ ಮಾಡಿ, ಹಣ, ಚಿನ್ನಾಭರಣ ದೋಚಿ ಪರಾರಿಯಾದ ಖದೀಮರು. ತುಮಕೂರು,ಜೂನ್,24,2023(..):ಖದೀಮರು ಒಂಟಿ ಮನೆಯಲ್ಲಿದ್ದ ದಂಪತಿ ಮೇಲೆ ಹಲ್ಲೆ ಮಾಡಿ ಹಣ ,ಚಿನ್ನಾಭರಣವನ್ನ ದೋಚಿ ಪರಾರಿಯಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುರುವೇಕೆರೆ ತಾಲೂಕಿನ ಬಾಣಸಂದ್ರ ಬಳಿಯ ಕಳ್ಳನಗಿಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೃಷ್ಣೇಗೌಡ ಮತ್ತು ಇಂದ್ರಮ್ಮ ಹಲ್ಲೆಗೊಳಗಾದ ದಂಪತಿ. ಕೃಷ್ಣೇಗೌಡರ ಮನೆ ಮೇಲೆ 9ಕ್ಕೂ ಹೆಚ್ಚು ಕಳ್ಳರ ಗ್ಯಾಂಗ್ ದಾಳಿ ಮಾಡಿದೆ. ಈ ವೇಳೆ ಕೃಷ್ಣೇಗೌಡ ಪತ್ನಿ ಇಂದ್ರಮ್ಮರ ಬಾಯಿಗೆ ಬಟ್ಟೆ ತುರುಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಇಂದ್ರಮ್ಮ ಕೊರಳಲ್ಲಿದ್ದ ಮಾಂಗಲ್ಯ ಸರ, ಓಲೆ ಹಾಗೂ ಮನೆಯಲ್ಲಿದ್ದ 20,000 ನಗದನ್ನು ದೋಚಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾಗಿರೊ ದಂಪತಿ ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : -- - – .