ಮೈಸೂರು ವಿವಿಯಲ್ಲಿ ‘ಬದಲಾವಣೆಗಾಗಿ ಮಾಧ್ಯಮ’ ವಿಶೇಷ ಕಾರ್ಯಗಾರ: ಶಾಸಕ ಹರೀಶ್ ಗೌಡರಿಂದ ಉದ್ಘಾಟನೆ. ಮೈಸೂರು,ಜೂನ್,22,2023(..):ಮೈಸೂರು ವಿಶ್ವ ವಿದ್ಯಾನಿಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ಹೈದ್ರಾಬಾದ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಬದಲಾವಣೆಗಾಗಿ ಮಾಧ್ಯಮ’ ವಿಶೇಷ ಕಾರ್ಯಗಾರವನ್ನ ಶಾಸಕ ಹರೀಶ್ ಗೌಡ ಉದ್ಘಾಟಿಸಿದರು. ಮೈಸೂರಿನ ವಿಜ್ಞಾನ ಭವನದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಈ ಕಾರ್ಯಗಾರ ನಡೆಯುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಪತ್ರಕರ್ತರು ಆಗಮಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಚೇತರಿಕೆ ಹಾಗೂ ಮಕ್ಕಳ ಶಿಕ್ಷಣ ಕುರಿತಾಗಿ ಶಿಕ್ಷಣ ತಜ್ಞ ಶೇಷಗಿರಿ ಅವರು ವಿಶೇಷ ಕಾರ್ಯಗಾರ ನಡೆಸಿಕೊಡಲಿದ್ದು ಕರ್ನಾಟಕದ ಶಿಕ್ಷಣದ ಬಗ್ಗೆ ಸಂಪೂರ್ಣ ಅಂಕಿ ಅಂಶಗಳ ಮಾಹಿತಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಸೂನ್ ಸೇನ್, ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕಿ ಸಪ್ನ, ಡಾ.ಮಮತಾ, ಡಾ.ರಾಕೇಶ್ ಉಪಸ್ಥಿತರಿದ್ದರು. : - - - – .