ಗೃಹಜ್ಯೋತಿ ಯೋಜನೆ ಅರ್ಜಿ ಸ್ವೀಕಾರ ಪ್ರಕ್ರಿಯೆಗೆ ಇಂದು ಚಾಲನೆ ಬೆಂಗಳೂರು, ಜೂನ್ 18, 2023 (..): ಗೃಹಜ್ಯೋತಿ ಯೋಜನೆ ಅರ್ಜಿ ಸ್ವೀಕಾರ ಪ್ರಕ್ರಿಯೆಗೆ ಇಂದು ಚಾಲನೆ ದೊರೆಯಲಿದೆ. ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ದಿನಕ್ಕೆ ಗರಿಷ್ಠ ಹತ್ತು ಲಕ್ಷ ಜನ ಅರ್ಜಿ ಸಲ್ಲಿಸುವ ಸಾಮರ್ಥ್ಯದೊಂದಿಗೆ ಸೇವಾ ಸಿಂಧು ಪೋರ್ಟಲ್‌ ಮುಕ್ತಗೊಳಿಸಲಾಗುತ್ತಿದೆ. ನೋಂದಣಿಯನ್ನು ಅತ್ಯಂತ ಸರಳಗೊಳಿಸಲಾಗಿದ್ದು, ಸದ್ಯಕ್ಕೆ ಕರಾರುಪತ್ರ ಸೇರಿದಂತೆ ಯಾವುದೇ ದಾಖಲೆಗಳನ್ನು ಕೇಳಿಲ್ಲ. ಈಗಾಗಲೇ ಶಕ್ತಿ ಯೋಜನೆಗೆ ಚಾಲನೆ ದೊರಕಿದ್ದರೂ ಶಕ್ತಿ ಸ್ಮಾರ್ಟ್‌ ಕಾರ್ಡ್‌ಗಾಗಿ ನೋಂದಣಿಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಅದೇ ರೀತಿ ಗೃಹಲಕ್ಷ್ಮೀ ಯೋಜನೆಯ ನೋಂದಣಿಗೂ ತಾಂತ್ರಿಕ ಕಾರಣ ಗಳಿಂದ ಚಾಲನೆ ಸಿಕ್ಕಿಲ್ಲ. ಯೋಜನೆಯಡಿ ಪ್ರತೀ ಗೃಹ ಬಳಕೆದಾರರಿಗೆ ಮಾಸಿಕ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಪೂರೈಸಲಾಗುತ್ತದೆ. ಸದ್ಯಕ್ಕೆ ಬಾಡಿಗೆದಾರರು ಕರಾರುಪತ್ರ ಮತ್ತಿತರ ದಾಖಲೆಗಳನ್ನು ಒದಗಿಸಬೇಕಾ ಗಿಲ್ಲ.