ಸಾವರ್ಕರ್, ಹೆಡ್ಗೆವಾರ್ ಪಠ್ಯಕ್ಕೆ ಕೋಕ್ ಹಿನ್ನೆಲೆ: ಸಿಎಂ ಸಿದ್ಧರಾಮಯ್ಯ ವಿರುದ್ದ ಮಾಜಿ ಸಚಿವ ಬಿ.ಸಿ ನಾಗೇಶ್ ವಾಗ್ದಾಳಿ. ತಿಪಟೂರು,ಜೂನ್,16,2023(..):ಪಠ್ಯದಿಂದ ವೀರ ಸಾವರ್ಕರ್, ಕೇಶವ್ ಹೆಡ್ಗೆವಾರ್ ವಿಷಯವನ್ನ ತೆಗೆದು ಹಾಕಿರುವ ಹಿನ್ನೆಲೆ ಸಿಎಂ ಸಿದ್ಧರಾಮಯ್ಯ ವಿರುದ್ದ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ವಾಗ್ದಾಳಿ ನಡೆಸಿದ್ದಾರೆ. ತಿಪಟೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಬಿಸಿ ನಾಗೇಶ್, ಸಿದ್ದರಾಮಯ್ಯ ಹಿಂದೂಗಳ ವಿರೋಧಿ. ಸಾವರ್ಕರ್, ಹೆಡ್ಗೇವಾರ್ ಅವರ ಪಠ್ಯ ತೆಗೆದಯಲು ನಿರ್ಧಾರ ಮಾಡಿದ್ದಾರೆ. ರಾಷ್ಟ್ರೀಯ ವಿಚಾರ ಸಂಸ್ಕೃತಿ ವಿಚಾರ ತೆಗೆದಿದ್ದಾರೆ. ಮುಸ್ಲೀಂ ಮತಗಳಿಂದ ಗೆದ್ದಿರುವುದಾಗಿ ನಂಬಿದ್ದಾರೆ ಎಂದು ಕಿಡಿಕಾರಿದರು. ಸಿದ್ಧರಾಮಯ್ಯರನ್ನ ಬುದ್ದಿ ಜೀವಿಗಳು ಭೇಟಿಯಾಗಿದ್ದರು. ಆಗ ಅನುಭವಿ ಸಿಎಂ ಆದವರು ನೋಡ್ತೀನಿ ಅನ್ನಬೇಕಿತ್ತು. ಸಿಎಂ ಪುಸ್ತಕವನ್ನೇ ನೋಡದೇ ಪರಿಷ್ಕರಣೆ ಎಂದಿದ್ದಾರೆ ಎಂದು ಬಿಸಿ ನಾಗೇಶ್ ಹರಿಹಾಯ್ದರು. : -- - - – - .