ಅಕ್ರಮ ಮರಳು ದಂಧೆ ತಡೆಯಲು ಹೋಗಿದ್ದ ಕಾನ್ಸ್ ಟೇಬಲ್ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಹತ್ಯೆ. ಕಲಬುರಗಿ,ಜೂನ್,16,2023(..):ಅಕ್ರಮ ಮರಳು ದಂಧೆ ತಡೆಯಲು ಹೋಗಿದ್ದ ಕಾನ್ಸ್ ಟೇಬಲ್ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಕಲ್ಬುರ್ಗಿಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ಈ ಘಟನೆ ನಡೆದಿದೆ. ಹೆಡ್​​ ಕಾನ್​ಸ್ಟೇಬಲ್​ ​ಮೈಸೂರ್ ಚೌಹಾಣ್ ​(51) ಹತ್ಯೆಯಾದವರು. ಅಕ್ರಮ ಮರಳು ಸಾಗಾಟ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ 10 ಗಂಟೆ ವೇಳೆಗೆ ಮೈಸೂರ್ ಚೌಹಾಣ್ ಅವರು ತಪಾಸಣೆಗೆ ಹೋಗಿದ್ದರು. ಆ ವೇಳೆ ದುಷ್ಕರ್ಮಿಗಳು ಬೈಕ್ ​​ನಲ್ಲಿ ಹೋಗುತ್ತಿದ್ದ ಮೈಸೂರ್​​ ಚೌಹಾಣ್​ ಮೇಲೆ ಟ್ರ್ಯಾಕ್ಟರ್ ಹರಿಸಿದ್ದಾರೆ. ಟ್ರ್ಯಾಕ್ಟರ್​ ಚಕ್ರಕ್ಕೆ ಸಿಲುಕಿದ ಮೈಸೂರ್ ಚೌಹಾಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೈಸೂರ್ ಚೌಹಾನ್ ಅವರು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಾಪೂರ್ ತಾಂಡಾ ನಿವಾಸಿಯಾಗಿದ್ದು, ನೆಲೋಗಿ ಠಾಣೆಯಲ್ಲಿ ಹೆಡ್ ಕಾನ್​​​ ಸ್ಟೇಬಲ್​​ ಆಗಿ ಸೇವೆ ಸಲ್ಲಿಸುತ್ತಿದ್ದರು. ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಓರ್ವ ಆರೋಪಿಯನ್ನ ಬಂಧಿಸಿದ್ದಾರೆ. : - – - – -