ಬಿಜೆಪಿ ಎಲ್ಲಾ ಹಗರಣಗಳ ಬಗ್ಗೆ ತನಿಖೆ : ಯಾರೇ ಆದರೂ ಸರಿ ಮುಲಾಜಿಲ್ಲದೇ ಕ್ರಮ- ಸಚಿವ ಪ್ರಿಯಾಂಕ್ ಖರ್ಗೆ. ಬೆಂಗಳೂರು,ಜೂನ್,16,2023(..):ಬಿಜೆಪಿ ಎಲ್ಲಾ ಹಗರಣಗಳ ಬಗ್ಗೆ ತನಿಖೆ ಮಾಡುತ್ತೇವೆ. ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡುತ್ತೇವೆ. ಬಿಜೆಪಿಯವರೇ ಆಗಲಿ ಕಾಂಗ್ರೆಸ್ ನವರೇ ಆಗಲಿ ಯಾರೇ ತಪ್ಪು ಮಾಡಿದ್ದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಹಗರಣದ ತನಿಖೆ ಹೊಣೆ ಯಾರಿಗೆ ಕೊಡಬೇಕು ಎಂಬ ನಿಟ್ಟಿನಲ್ಲಿ ತೀರ್ಮಾನ ಮಾಡುತ್ತೇವೆ. ಬಿಟ್ ಕಾಯಿನ್ ತನಿಖೆಗೆ ಸೈಬರ್ ತಜ್ಞರು ಬೇಕು. ಕೆಲವು ಕಡೆ ಎಸ್ ಐಟಿ ತನಿಖೆ ಆಗುತ್ತೆ ಕೆಲವು ನ್ಯಾಯಾಂಗ ತನಖೆಯಾಗುತ್ತೆ ಬಿಟ್ ಕಾಯಿನ್, ಪಿಎಸ್ ಐ ಕೆಪಿಟಿಸಿಎಲ್, ಹೆಣದ ಮೇಲೆ ಹಣ ಮಾಡಿದ್ದನ್ನೂ ತನಿಖೆ ಮಾಡುತ್ತೇವೆ ಎಂದರು. ಎಲ್ಲದರ ತನಿಖೆಗೆ ನಾವೇ ಒತ್ತಾಯಿಸಿದ್ದವು. ಈಗ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಎಲ್ಲವನ್ನೂ ತನಿಖೆ ಮಾಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. : – –- - - .