ಪಠ್ಯಪರಿಷ್ಕರಣೆ ವಿಚಾರ ಜನರ ಮುಂದೆ ಇಡುತ್ತೇವೆ- ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಬೆಂಗಳೂರು,ಜೂನ್,15,2023(..):ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲು ಇಂದು ನಡೆದ ಸಚಿವ ಸಂಪುಟ ನಿರ್ಧರಿಸಿದ ವಿಚಾರವಾಗಿ ಕಿಡಿಕಾರಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಈ ವಿಚಾರವನ್ನು ನಾವು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ ಎಂದಿದ್ದಾರೆ. ಈ ಕುರಿತು ಮಾತನಾಡಿದ ರವಿಕುಮಾರ್, ಲೋಕಸಭೆ, ಜಿಲ್ಲಾ ಪಂಚಾಯತ್ ಚುನಾವಣೆಗೆ ಈ ವಿಚಾರ ತೆಗೆದುಕೊಂಡು ಹೋಗುತ್ತೇವೆ. ಜನರ ಮುಂದೆ ಈ ವಿಚಾರ ಇಡುತ್ತೇವೆ. ನಿಮಗೆ ದೇಶ ಭಕ್ತಿ ಇದ್ದರೆ, ತಾಕತ್ ಇದ್ದರೆ ಅಂಬೇಡ್ಕರ್ ಕಾಂಗ್ರೆಸ್ ಬಗ್ಗೆ ಏನು ಹೇಳಿದರು ಅದನ್ನು ಪ್ರಕಟಿಸಿ. ಸಾವರ್ಕರ್ ಪಾಠ ಓದಿದರೆ ಮಕ್ಕಳು ದೇಶ ದ್ರೋಹಿ ಆಗುತ್ತಾರಾ? ಸಾವರ್ಕರ್ ಹೇಡಿ ಅಲ್ಲ, ಕಾಂಗ್ರೆಸ್ ​ನವರು ರಣ ಹೇಡಿಗಳು ಎಂದು ವಾಗ್ದಾಳಿ ನಡೆಸಿದರು. ಮಾತ್ರವಲ್ಲದೆ, ದೇಶದ್ರೋಹಿಗಳು. ಟಿಪ್ಪು ಪಾಠ ಕಾಂಗ್ರೆಸ್​ನವರಿಗೆ ಬೇಕು. ಏಕೆಂದರೆ ತುಷ್ಟಿಕರಣ‌ ಮಾಡಲು ಎಂದು ಆಕ್ರೋಶ ಹೊರಹಾಕಿದರು. : - - – – .