ಪಾವಗಡ ಸೋಲಾರ್ ​ಪಾರ್ಕ್ ವಿಸ್ತರಿಸಲು ತೀರ್ಮಾನ-ಡಿಸಿಎಂ ಡಿ.ಕೆ ಶಿವಕುಮಾರ್. ತುಮಕೂರು,ಜೂನ್,14,2023(..):ಪಾವಗಡ ತಾಲೂಕಿನ ತಿರುಮಣಿಯಲ್ಲಿನ ಸೋಲಾರ್ ಪಾರ್ಕ್ ಅನ್ನು​ 10 ಸಾವಿರ ಎಕರೆಗೆ ವಿಸ್ತರಣೆ ಮಾಡಲು ತೀರ್ಮಾನಿಸಿದ್ದೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು. ಸೋಲಾರ್​ಪಾರ್ಕ್​ ಬಳಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ನಾನು ಮತ್ತು ಇಂಧನ ಸಚಿವ ಕೆಜೆ ಜಾರ್ಜ್ ಅವರು ಹೆಲಿಕಾಪ್ಟರ್​ ಮೂಲಕ ಸೋಲಾರ್ ಪಾರ್ಕ್​ ವೀಕ್ಷಣೆ ಮಾಡಿದ್ದೇವೆ. ಸೋಲಾರ್​ ಪಾರ್ಕ್​ಗೆ ಭೂಮಿ ನೀಡಿದ ರೈತರಿಗೆ ಸಮಾಧಾನವಿದೆ. ಅಗ್ರಿಮೆಂಟ್​​​ನಂತೆ ಜಮೀನು ನೀಡಿದ ರೈತರ ಖಾತೆಗೆ ಹಣ ಹೋಗುತ್ತಿದೆ, ಪ್ರತಿ ವರ್ಷ 25 ಸಾವಿರ ಬಾಡಿಗೆ ಪಡೆಯುತ್ತಿದ್ದಾರೆ. ಎಂದು ತಿಳಿಸಿದರು. ಹಿಂದಿನ ನಿಯಮದಂತೆ ರೈತರು ಮುಂದೆ ಬಂದರೆ ಸೋಲಾರ್ ಪಾರ್ಕ್ ವಿಸ್ತರಣೆ ಮಾಡುತ್ತೇವೆ. ನಮ್ಮ ಸೋಲಾರ್ ಪಾರ್ಕ್​ ವಿಶ್ವದಲ್ಲೇ ನಂಬರ್ 1 ಇತ್ತು, ಈಗ ರಾಜಸ್ಥಾನದ ನಡುವೆ ಪೈಪೋಟಿಯಿದೆ ಎಂದರು. ಹಾಗೆಯೇ ರಾಜ್ಯದ ಉದ್ದಗಲಕ್ಕೂ ಕುಸುಮ ಯೋಜನೆ ಮಾಡುತ್ತಿದ್ದೇವೆ. ರೈತರ ಪಂಪ್ ಸೆಟ್‌ಗೆ ಅವರೇ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು. : –-- -- .