ತಾಯಿಯನ್ನೇ ಕೊಂದು ಸೂಟ್ ಕೇಸ್ ನಲ್ಲಿ ಠಾಣೆಗೆ ಶವತಂದ ಮಗಳು: ಪೊಲೀಸರಿಗೆ ಶಾಕ್. ಬೆಂಗಳೂರು,ಜೂನ್,13,2023(..):ಮಗಳೊಬ್ಬಳು ತನ್ನತಾಯಿಯನ್ನೇ ಕೊಂದು ಸೂಟ್ ಕೇಸ್​​ ನಲ್ಲಿ ಶವವನ್ನು ಪೊಲೀಸ್ ಠಾಣೆಗೆ ತಂದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಗರದ ಮೈಕೋಲೇಔಟ್‌ ಪೊಲೀಸ್​​ ಠಾಣೆಗೆ ಮಗಳೊಬ್ಬಳು ತನ್ನ ತಾಯಿಯ ಶವವನ್ನ ಸೂಟ್ ಕೇಸ್ ನಲ್ಲಿ ತಂದಿದ್ದು ಅಲ್ಲಿದ್ದ ಪೊಲೀಸರು ಶಾಕ್ ಆದರು. ಪುತ್ರಿ ಸೋನಾಲಿ ಸೇನ್ ಎಂಬುವವಳೆ ಈ ಕೃತ್ಯವೆಸಗಿರುವುದು. ಸೋನಾಲಿ ಸೇನ್ ಕುಟುಂಬ ಕೊಲ್ಕತ್ತಾ ಮೂಲದವರಾಗಿದ್ದು, ಕಳೆದ 6 ವರ್ಷಗಳಿಂದ ನಗರದ ಬಿಳೆಕಳ್ಳಿಯ ಎನ್​​ಎಸ್ ಆರ್ ಗ್ರೀನ್ ಅಪಾರ್ಟ್ಮೆಂಟ್​ ನಲ್ಲಿ ವಾಸವಾಗಿದ್ದರು. ಫ್ಲಾಟ್​​​ ನಲ್ಲಿ ಸೋನಾಲಿ ಸೇನ್​​​, ಸೋನಾಲಿ ಸೇನ್​​ ಪತಿ, ಮಗ, ಅತ್ತೆ ಮತ್ತು ಸೋನಾಲಿ ಸೇನ್ ತಾಯಿ ವಾಸವಾಗಿದ್ದರು. ನಿನ್ನೆ ಬೆಳಿಗ್ಗೆ 7 ಗಂಟೆಗೆ ಸೋನಾಲಿ ಸೇನ್​ ತಾಯಿಗೆ ನಿದ್ದೆ ಮಾತ್ರೆ ನೀಡಿದ್ದು, ಬಳಿಕ ಬೆಳಿಗ್ಗೆ 11 ಗಂಟೆಗೆ ತಾಯಿ ಹೊಟ್ಟೆ ನೋವು ಎಂದಿದ್ದರು. ಈ ವೇಳೆ ಸೋನಾಲಿ ಸೇನ್​​ ತಾಯಿದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಸೂಟ್​ ಕೇಸ್​​ ನಲ್ಲಿ ತಾಯಿಯ ಶವ ಹಾಕಿಕೊಂಡು ಮಧ್ಯಾಹ್ನ 1 ಗಂಟೆಗೆ ಊಬರ್​​ ಕ್ಯಾಬ್ ​ನಲ್ಲಿ ಮೈಕೋಲೇಔಟ್‌ ಪೊಲೀಸ್​​ ಠಾಣೆಗೆ ಬಂದಿದ್ದಾಳೆ ಎನ್ನಲಾಗಿದೆ. ಸೂಟ್​​ಕೇಸ್​ನಲ್ಲಿ ಮೃತದೇಹ ತಂದದ್ದನ್ನು ಕಂಡ ಪೊಲೀಸರು ಶಾಕ್ ಆಗಿದ್ದು, ಕೂಡಲೆ ಆರೋಪಿ ಸೋನಾಲಿ ಸೇನ್​​ ಅವರನ್ನು ವಶಕ್ಕೆ ಪಡೆದರು. ಬಳಿಕ ಸೋನಾಲಿ ಅವರನ್ನು ವಿಚಾರಣೆಗೆ ಒಳಪಡಿಸಿದರು. : - - – – –