ರಾಜ್ಯಗಳಿಗೆ ಜಿಎಸ್ ಟಿ ಪಾಲು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ: ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು..? ನವದೆಹಲಿ,ಜೂನ್,12,2023(..):ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ಜಿಎಸ್ ಟಿ ಪಾಲು ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ : 4,314 ಕೋಟಿ ರೂ. ಹಂಚಿಕೆ ಮಾಡಿದೆ. ಜೂನ್ ತಿಂಗಳಲ್ಲಿ ವಿವಿಧ ರಾಜ್ಯಗಳಿಗೆ ಒಟ್ಟಿಗೆ ಎರಡು ಕಂತುಗಳ ಜಿಎಸ್​ಟಿ ಪಾಲು ಹಂಚಿಕೆ ಮಾಡಿದೆ. ಒಟ್ಟು 1,18,280 ಕೋಟಿ ರೂ ಹಣವನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಿದೆ. ರಾಜ್ಯಗಳಲ್ಲಿ ವಿವಿಧ ಯೋಜನೆಗಳಿಗೆ ಹಣ ಹೂಡಿಕೆ ತ್ವರಿತಗೊಳ್ಳಲೆಂಬ ಉದ್ದೇಶಕ್ಕೆ ಕೇಂದ್ರದಿಂದ ಮುಂದಿನ ತಿಂಗಳ ಜಿಎಸ್​ಟಿ ಪಾಲನ್ನು ಮುಂಗಡವಾಗಿ ಸೇರಿಸಿ ಕೊಡಲಾಗಿದೆ. ವಿವಿಧ ರಾಜ್ಯಗಳಿಗೆ ನೀಡಲಾಗಿರುವ 1,18,280 ರೂ. ಪೈಕಿ ಕರ್ನಾಟಕಕ್ಕೆ 4,314 ರೂ, ಮಹಾರಾಷ್ಟ್ರ ರಾಜ್ಯಕ್ಕೆ ಸಿಕ್ಕಿರುವುದು 7,472 ಕೋಟಿ ರೂ ನೀಡಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ದೇಶದಲ್ಲಿ ಅತಿಹೆಚ್ಚು ಜಿಎಸ್​ಟಿ ಸಂಗ್ರಹ ಮಾಡಿ ಕೇಂದ್ರಕ್ಕೆ ತಲುಪಿಸುವ ರಾಜ್ಯಗಳಾಗಿವೆ. ಇನ್ನು ಉತ್ತರಪ್ರದೇಶಕ್ಕೆ 21,218 ಕೋಟಿ ರೂ ಜಿಎಸ್ ಟಿ ಪಾಲು ಸಿಕ್ಕಿದೆ. ವಿವಿಧ ರಾಜ್ಯಗಳಿಗೆ ಬಿಡುಗಡೆಯಾಗಿರುವ ಜಿಎಸ್ ಟಿ ಪಾಲು ಹೀಗಿದೆ ನೋಡಿ.. ಉತ್ತರಪ್ರದೇಶ: 21,218 ಕೋಟಿ ರೂ. ಬಿಹಾರ: 11,897 ಕೋಟಿ ರೂ. ಮಧ್ಯಪ್ರದೇಶ: 9,285 ಕೋಟಿ ರೂ. ಪಶ್ಚಿಮ ಬಂಗಾಳ: 8,898 ಕೋಟಿ ರೂ. ಮಹಾರಾಷ್ಟ್ರ: 7,472 ಕೋಟಿ ರೂ. ರಾಜಸ್ಥಾನ್: 7,128 ಕೋಟಿ ರೂ. ಒಡಿಶಾ: 5,356 ಕೋಟಿ ರೂ. ತಮಿಳುನಾಡು: 4,825 ಕೋಟಿ ರೂ. ಆಂಧ್ರಪ್ರದೇಶ: 4,787 ಕೋಟಿ ರೂ. ಕರ್ನಾಟಕ: 4,314 ಕೋಟಿ ರೂ. ಗುಜರಾತ್: 4,114 ಕೋಟಿ ರೂ. ಛತ್ತೀಸ್​ಗಡ: 4,030 ಕೋಟಿ ರೂ. ಜಾರ್ಖಂಡ್: 3,912ಕೋಟಿ ರೂ. ಅಸ್ಸಾಮ್: 3,700 ಕೋಟಿ ರೂ. ತೆಲಂಗಾಣ: 2,486 ಕೋಟಿ ರೂ. ಕೇರಳ: 2,277 ಕೋಟಿ ರೂ. ಪಂಜಾಬ್: 2,137 ಕೋಟಿ ರೂ. ಅರುಣಾಚಲಪ್ರದೇಶ: 2,078 ಕೋಟಿ ರೂ. ಉತ್ತರಾಖಂಡ್: 1,322 ಕೋಟಿ ರೂ. ಹರ್ಯಾಣ: 1,293 ಕೋಟಿ ರೂ. ಹಿಮಾಚಲಪ್ರದೇಶ: 982 ಕೋಟಿ ರೂ. ಮೇಘಾಲಯ: 907 ಕೋಟಿ ರೂ. ಮಣಿಪುರ: 847 ಕೋಟಿ ರೂ. ತ್ರಿಪುರಾ: 837 ಕೋಟಿ ರೂ. ನಾಗಾಲ್ಯಾಂಡ್: 673 ಕೋಟಿ ರೂ. ಮಿಝೋರಾಂ: 591 ಕೋಟಿ ರೂ. ಸಿಕ್ಕಿಂ: 459 ಕೋಟಿ ರೂ. ಗೋವಾ: 457 ಕೋಟಿ ರೂ. : - – - – .