ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಸ್ಥಾನ ಒಪ್ಪಿಕೊಂಡ ಶಾಸಕ ಪುಟ್ಟರಂಗಶೆಟ್ಟಿ. ಚಾಮರಾಜನಗರ,ಜೂನ್,8,2023(..):ವಿಧಾನಸಭೆ ಉಪಸಭಾಪತಿಯಾಗಲು ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಒಪ್ಪಿದ್ದಾರೆ. ಈ ಕುರಿತು ಇಂಧು ಮಾತನಾಡಿದ ಶಾಸಕ ಪುಟ್ಟರಂಗಶೆಟ್ಟಿ, ಒಂದು ವರ್ಷದ ನಂತರ ಸಚಿವ ಸ್ಥಾನ ನೀಡುವುದಾಗಿ ವರಿಷ್ಠರು ಭರವಸೆ ಕೊಟ್ಟಿದ್ದಾರೆ. ಹೀಗಾಗಿ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಸ್ಥಾನವನ್ನು ಒಪ್ಪಿಕೊಂಡಿದ್ದೇನೆ ಎಂದಿದ್ದಾರೆ. ನಾನು ಕಾಂಗ್ರೆಸ್ ಕಟ್ಟಾಳು . ವರಿಷ್ಠರು ಹೇಳಿದಂತೆ ಕೇಳುವೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಾದರೂ ಹೇಳಿಕೊಳ್ಳುವ ಆಗಿಲ್ಲ. ವರಿಷ್ಠರು ಹೇಳಿದರೇ ಒಪ್ಪಬೇಕು. ಹೈಕಮಾಂಡ್ ಕೊಟ್ಟಿದ್ದನ್ನ ನಿಭಾಯಿಸುತ್ತೇನೆ ಎಂದು ಶಾಸಕ ಪುಟ್ಟರಂಗಶೆಟ್ಟಿ ತಿಳಿಸಿದರು. : - - – - -