ಮೊದಲು ಬಿಜೆಪಿಯವರು ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕಲಿ- ಡಿಸಿಎಂ ಡಿ.ಕೆ ಶಿವಕುಮಾರ್ ಟಾಂಗ್. ಬೆಂಗಳೂರು,ಜೂನ್,7,2023(..):ರಾಜ್ಯದಲ್ಲಿ ಜಾರಿಗೆ ತರುತ್ತಿರುವ ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರ ಷರತ್ತು ವಿಧಿಸುತ್ತಿರುವುದನ್ನ ಟೀಕಿಸಿರುವ ಬಿಜೆಪಿ ನಾಯಕರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ. ನಮ್ಮ ಗ್ಯಾರಂಟಿಯಿಂದ ಬಿಜೆಪಿಯವರಿಗೆ ಅಸೂಯೆ. ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ಕೊಡ್ತೀವಿ ಎಂದಿದ್ದರು. ಮೊದಲು ಬಿಜೆಪಿಯವರು ಎಲ್ಲರ ಖಾತೆ 15 ಲಕ್ಷ ರೂ. ಹಾಕಲಿ ಎಂದು ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಒಬ್ಬರಿಗೆ 1 ರೂ. ಕೊಡಬೇಕಾದ್ರೆ ಅಕೌಂಟೆಬಿಲಿಟಿ ಇಟ್ಟುಕೊಳ್ಳಬೇಕು. ಬಡವರಿಗೆ ಗ್ಯಾರಂಟಿ ಯೋಜನೆ ನೀಡಬೇಕೆಂದು ತೀರ್ಮಾನಿಸಿದ್ದೆವು. ಟ್ಯಾಕ್ಸ್​ ಕಟ್ಟುವವರು 2 ಸಾವಿರ ರೂ. ಕೊಡಿ ಎಂದು ಕೇಳುವುದಿಲ್ಲ. 2 ಸಾವಿರ ಹಣ ಬೇಡ ಎಂದು ಬಹಳ ಜನ ಪತ್ರ ಬರೆದಿದ್ದಾರೆ. ಪಾಪ ಬಿಜೆಪಿಯವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಬೇಡಿ ಎನ್ನಲು ಆಗುತ್ತಾ? ಎಂದು ಕುಟುಕಿದರು. : - – 15 – ’- - -