ನಿವೇಶನ ಕೊಟ್ಟಿರುವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ- ಮುಡಾ ಅಧ್ಯಕ್ಷ ಮರೀಗೌಡ ಮೈಸೂರು,ಆಗಸ್ಟ್,23,2024 (..):ಮುಡಾ ಅಕ್ರಮ ಪ್ರಕರಣ ಸಂಬಂಧ ನಾನು ಅಧ್ಯಕ್ಷನಾಗಿರುವುದು ಈಗ. ಹೀಗಾಗಿ ಸಿಎಂ ಪತ್ನಿಗೆ ನಿವೇಶನ ಕೊಟ್ಟಿರುವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮುಡಾ ಅಧ್ಯಕ್ಷ ಮರೀಗೌಡ ಸ್ಪಷ್ಟಪಡಿಸಿದರು. 79 ಎಕರೆಗೆ ಬದಲಿ ನಿವೇಶನ ಕೊಡಿಸಿರುವ ವಿಚಾರ ಕುರಿತು ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮರೀಗೌಡ, ಮುಡಾ ಅಕ್ರಮ ಬಗ್ಗೆ ಈಗ ತನಿಖೆ ನಡೆಯುತ್ತಿದೆ. ಯಾರು ಅಕ್ರಮ ಮಾಡಿದ್ದಾರೆ, ಹೇಗೆ ಮಾಡಿದ್ದಾರೆ ಎಂದು ತನಿಖೆ ಬಳಿಕ ತಿಳಿಯುತ್ತದೆ. ಆರೋಪ ಮಾಡುವವರು ಮಾಡಲಿ ಬಿಡಿ ಎಂದರು. ಸಿದ್ದರಾಮಯ್ಯನವರ ಈ ಪರಿಸ್ಥಿತಿಗೆ ಮರೀಗೌಡ ಕಾರಣ ಎಂಬ ಮಾವಿನಹಳ್ಳಿ ಸಿದ್ದೇಗೌಡ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮರೀಗೌಡ, ಮಾವಿನಹಳ್ಳಿ ಸಿದ್ದೇಗೌಡ ಹೇಳಿಕೆಗೆಲ್ಲಾ ನಾನು ಪ್ರತಿಕ್ರಿಯೆ ನೀಡಲ್ಲ. ಸಿದ್ದರಾಮಯ್ಯ ಪತ್ನಿಗೆ ನಿವೇಶನ ಹಂಚಿಕೆ ಮಾಡಿರೋದು 2021ರಲ್ಲಿ. ನಾನು ಅಧ್ಯಕ್ಷನಾಗಿರೋದು ಈಗ. ನಿವೇಶನ ಕೊಟ್ಟೋರೋದಕ್ಕೂ ನನಗು ಯಾವುದೇ ಸಂಬಂಧವಿಲ್ಲ. ಸಿದ್ದೇಗೌಡರ ಹೇಳಿಕೆಗೆ ಮನ್ನಣೆ ನೀಡಬೇಕಾದ ಅನಿವಾರ್ಯತೆ ಇಲ್ಲ. ಎಲ್ಲಾ ವಿಚಾರಗಳು ತನಿಖೆ ಬಳಿಕ ಗೊತ್ತಾಗಲಿದೆ ಎಂದರು. : , , ,