ವಿಪಕ್ಷಗಳು ಟೀಕೆ ಮಾಡುತ್ತಲೇ ಇರಲಿ: ನಾವು ಜನರ ಪರ ಕೆಲಸ ಮಾಡುತ್ತೇವೆ- ಡಿಸಿಎಂ ಡಿ.ಕೆ ಶಿವಕುಮಾರ್. ಬೆಂಗಳೂರು,ಜೂನ್,3,2023(..):ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಗ್ಯಾರಂಟಿ ಯೋಜನೆ ಜಾರಿಗೆ ಘೋಷಣೆ ಮಾಡಿದ್ದು ಈ ಕುರಿತು ವಿಪಕ್ಷಗಳು ಮಾಡುತ್ತಿರುವ ಟೀಕೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಟೀಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ನಾವು ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿ ಯೋಜನೆ ಬಗ್ಗೆ ವಿಪಕ್ಷದವರು ಟೀಕೆ ಮಾಡತ್ತಿದ್ದಾರೆ. ವಿರೋಧ ಪಕ್ಷದವರು ಟೀಕೆ ಮಾಡುವುದಕ್ಕೆ ಇರುವುದು. ಟೀಕೆ ಮಾಡಲಿ. ನಾವು ಜನರ ಪರ ಕೆಲಸ ಮಾಡುತ್ತಿದ್ದೇವೆ. ಕುಮಾರಣ್ಣ ದೊಡ್ಡವರು ಅವರ ಬಗ್ಗೆ ನಾನ್ಯಾಕೆ ಮಾತನಾಡಲಿ ಎಂದರು. ಒಡಿಶಾ ರೈಲು ಅಪಘಾತ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ರೈಲು ಅಪಘಾತ ದುರದೃಷ್ಟಕರ, ಕರ್ನಾಟಕ ಜನರ ದುಃಖ ಜೊತೆಯಲ್ಲಿದೆ. ಅಪಘಾತದ ಕಾರಣ ಹುಡುಕೋದು ಕಷ್ಟ. ಆದರೆ, ಮುಂದೆ ಈ ರೀತಿ ಆಗದ ಹಾಗೇ ನೋಡಿಕೊಳ್ಳಬೇಕು ಅಂದರೆ ಕಾರಣ ಹುಡುಕಬೇಕು ಎಂದು ಹೇಳಿದರು. : –- - – - - .