ಒಡಿಶಾದಲ್ಲಿ ರೈಲು ದುರಂತ: ಕಂಬನಿ ಮಿಡಿದ ಸ್ಪೀಕರ್ ಯು.ಟಿ.ಖಾದರ್ ಬೆಂಗಳೂರು,ಜೂನ್,3,2023(..):ಒಡಿಶಾದ ಬಹನಾಗ ನಿಲ್ದಾಣದ ಬಳಿ 3 ರೈಲುಗಳ ನಡುವೆ ಅಪಘಾತ ಸಂಭವಿಸಿ 230ಕ್ಕೂ ಹೆಚ್ಚು ಜನ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಕಂಬನಿ ಮಿಡಿದಿದ್ದಾರೆ. ಒಡಿಶಾದಲ್ಲಿನ ರೈಲು ಅಪಘಾತ ಅತ್ಯಂತ ನೋವಿನ ಸಂಗತಿ. ಈ ಅಪಘಾತ ಎಲ್ಲಾ ಇಲಾಖೆಗಳ ಕಣ್ಣು ತೆರೆಸುವಂತೆ ಮಾಡಿದೆ. ರೈಲು ಅಪಘಾತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ಮುಂದೆ ಈ ರೀತಿಯ ಅಪಘಾತ ಆಗದಂತೆ ತಡೆಯಬೇಕಿದೆ ಎಂದು ಸ್ಪೀಕರ್ ಯು.ಟಿ ಖಾದರ್ ತಿಳಿಸಿದ್ದಾರೆ. : - – - - –