5ಗ್ಯಾರಂಟಿ ಜಾರಿ ಮಾಡಲ್ಲ ಎಂದಿಲ್ಲ, ಜಾರಿ ಮಾಡೇ ಮಾಡ್ತೇವೆ- ಸಚಿವ ಪ್ರಿಯಾಕ್ ಖರ್ಗೆ. ಬೆಂಗಳೂರು,ಜೂನ್,1,2023(..):ಐದು ಗ್ಯಾರಂಟಿ ಜಾರಿ ಮಾಡಲ್ಲ ಎಂದಿಲ್ಲ, ಜಾರಿ ಮಾಡೇ ಮಾಡ್ತೇವೆ ಎಂದು ಗ್ರಾಮೀಣಾಭಿವೃದ್ದಿಇಲಾಖೆ ಸಚಿವ ಪ್ರಿಯಾಕ್ ಖರ್ಗೆ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಐದು ಗ್ಯಾರಂಟಿಗಳನ್ನು ಜಾರಿ ಮಾಡಿಯೇ ಮಾಡುತ್ತೇವೆ. ಈಗಾಗಲೇ ಗ್ಯಾರಂಟಿ ಜಾರಿ ಬಗ್ಗೆ ಅಧಿಕಾರಿಗಳ ಜತೆ ಚರ್ಚೆಯಾಗಿದೆ. ಯಾವ ರೀತಿ ಗ್ಯಾರಂಟಿ ಜಾರಿ ಮಾಡಬೇಕು ಅನ್ನೋದರ ಬಗ್ಗೆ ಚರ್ಚೆ ನಡೆಯುತ್ತಿದೆ. ನಾಳೆ ಸಚಿವ ಸಂಪುಟದಲ್ಲಿ ಅಂತಿಮವಾಗಿ ಎಲ್ಲವೂ ಗೊತ್ತಾಗಲಿದೆ ಎಂದು ಸ್ಪಷ್ಟನೆ ನೀಡಿದರು. ವಿರೋಧ ಪಕ್ಷದವರು ಯಾವ ಆಧಾರದ ಮೇಲೆ ನಮಗೆ ಟೀಕಿಸುತ್ತಿದ್ದಾರೆ. ನಮಗೆ ಮತ ಹಾಕಿದ ಜನರ ಹಿತ ದೃಷ್ಟಿಯಿಂದ ಕೆಲಸ ಮಾಡುತ್ತೇವೆ. ಜೂನ್ 1ರಂದು ಗ್ಯಾರಂಟಿ ಜಾರಿ ಮಾಡುತ್ತೇವೆ ಅಂತಾ ಯಾರು ಹೇಳಿದ್ದು 5 ‌ಗ್ಯಾರಂಟಿ ಜಾರಿ ಮಾಡಲ್ಲ ಎಂದಿಲ್ಲ, ಜಾರಿ‌ ಮಾಡೇ ಮಾಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. : - 5 - - – - .