ಗ್ಯಾರಂಟಿಗಳು ಏಕಕಾಲದಲ್ಲಿ ಜಾರಿಗೆ ಬರಲಿವೆ: ಆದ್ರೆ ಕಂಡೀಷನ್ ಅಪ್ಲೈ- ಸಚಿವ ಶಿವಾನಂದ ಪಾಟೀಲ್. ಬಾಗಲಕೋಟೆ,ಮೇ,29,2023(..):ಗ್ಯಾರಂಟಿ ಯೋಜನೆಗಳು ಏಕಕಾಲದಲ್ಲಿ ಜಾರಿಗೆ ಬರಲಿವೆ. ಆದರೆ ಅದಕ್ಕೆ ಕಂಡೀಷನ್ ಅಪ್ಲೈ ಆಗುತ್ತದೆ ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ಯಾವುದೇ ಸರ್ಕಾರಿ ಯೋಜನೆ ತೆಗೆದುಕೊಂಡರೂ ಮಾನದಂಡ ಇದೆ. ಜೂನ್ 1 ರಿಂದ ಜಾರಿ ಮಾಡಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ. ಐದು ಗ್ಯಾರಂಟಿಗಳು ಏಕಕಾಲಕ್ಕೆ ಜಾರಿಗೆ ಬರುತ್ತವೆ ಮಾನದಂಡ ಇಲ್ಲದೇ ಇರುವ ಯೋಜನೆ ದೇಶದಲ್ಲಿ ಇದೆಯಾ..? ಎಂದು ಪ್ರಶ್ನಿಸಿದರು. ರೈತರಿಗೆ ನೀರು ಕರೆಂಟ್ ಉಚಿತ ಕೊಡುತ್ತೇವೆ ಈಗ ಅದಕ್ಕೂ ಲೆಕ್ಕಾಚಾರ ಹಾಕುವ ಕಾಲ ಬಂದಿದೆ. ಒಣ ಬೇಸಾಯದವರಿಗೆ ಯಾವುದೇ ಲಾಭವಿಲ್ಲ ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದರು. : – - - - .