ನೂತನ ಸಚಿವರಿಗೆ ಕೊಠಡಿಗಳನ್ನ ಹಂಚಿಕೆ ಮಾಡಿದ ಸರ್ಕಾರ. ಬೆಂಗಳೂರು,ಮೇ,29,2023(..):ಸಿಎಂ ಸಿದ್ದರಾಮಯ್ಯ ಅವರ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ ಇದೀಗ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಆದೇಶ ಹೊರಡಿಸಿದೆ. ಕೆಲ ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿ ನೀಡಿದ್ದರೆ, ಇನ್ನು ಕೆಲ ಸಚಿವರಿಗೆ ವಿಕಾಸಸೌಧಲ್ಲಿನ ಕೊಠಡಿಗಳನ್ನು ನೀಡಲಾಗಿದೆ. ಈಗಾಗಲೇ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 335, 336, 337 ಮತ್ತು 337 ಎ, ಸಚಿವರಾದ ಡಾ ಜಿ.ಪರಮೇಶ್ವರ್ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 327 ಮತ್ತು 327 ಎ ಹಾಗೂ ರಾಮಲಿಂಗಾರೆಡ್ಡಿ ಅವರಿಗೆ ವಿಧಾನ ಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 329 ಮತ್ತು 329 ಎ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಯಾರಿಗೆ ಯಾವ ಸಂಖ್ಯೆ ಕೊಠಡಿ ಸಿಕ್ಕಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಹೆಚ್.ಕೆ.ಪಾಟೀಲ್​- ವಿಧಾನಸೌಧದ 314, 314A ಕೊಠಡಿ ಕೃಷ್ಣ ಭೈರೇಗೌಡ- ವಿಧಾನಸೌಧದ 244, 245 ಕೊಠಡಿ ಡಾ.ಹೆಚ್.ಸಿ.ಮಹದೇವಪ್ಪ- ವಿಧಾನಸೌಧದ 330, 330A ಕೊಠಡಿ ಕೆ.ವೆಂಕಟೇಶ್​- ವಿಧಾನಸೌಧದ 329, 329A ಕೊಠಡಿ ಕೆ.ಎನ್.ರಾಜಣ್ಣ- ವಿಧಾನಸೌಧದ 339, 339A ಕೊಠಡಿ ಶರಣಪ್ಪ ದರ್ಶನಾಪುರ-ವಿಧಾನಸೌಧದ 328, 328A ಕೊಠಡಿ ಸಂತೋಷ್​ ಲಾಡ್​- ವಿಧಾನಸೌಧದ 342, 342A ಕೊಠಡಿ ಭೈರತಿ ಸುರೇಶ್-​ವಿಧಾನಸೌಧದ 316, 316A ಕೊಠಡಿ ಬಿ.ನಾಗೇಂದ್ರ- ವಿಧಾನಸೌಧದ 343, 343A ಕೊಠಡಿ ಲಕ್ಷ್ಮೀ ಹೆಬ್ಬಾಳ್ಕರ್​- ವಿಧಾನಸೌಧದ 301, 301A ಕೊಠಡಿ ರಹೀಂ ಖಾನ್​- ವಿಕಾಸಸೌಧದ 38, 39 ಕೊಠಡಿ ಹಂಚಿಕೆ ಡಾ.ಎಂ.ಸಿ.ಸುಧಾಕರ್​- ವಿಕಾಸಸೌಧದ 344, 345 ಕೊಠಡಿ : – - – .