ಆರ್ ಎಸ್ ಎಸ್ ನಿಷೇಧ ನೆಹರುರಿಂದಲೇ ಆಗಿಲ್ಲ. ಪ್ರಿಯಾಂಕ್ ಖರ್ಗೆಯಿಂದ ಸಾಧ್ಯವೇ..? ಬಿಜೆಪಿ ಶಾಸಕ ಟಾಂಗ್. ಶಿವಮೊಗ್ಗ,ಮೇ,26,2023(..): ಭಜರಂಗದಳ, ಆರ್ ಎಸ್ ಎಸ್ ಸಂಘಟನೆ ನಿಷೇಧ ಮಾಡಲು ನೆಹರೂರಿಂದಲೇ ಆಗಲಿಲ್ಲ. ಇನ್ನು ಸಚಿವ ಪ್ರಿಯಾಂಕ್​​ ಖರ್ಗೆ ಅವರಿಂದ ಸಾಧ್ಯವೇ…? ಎಂದು ಶಿವಮೊಗ್ಗ ಬಿಜೆಪಿ ಶಾಸಕ ಚನ್ನಬಸಪ್ಪ ಟಾಂಗ್ ನೀಡಿದ್ದಾರೆ. ಈ ಕುರಿತು ಮಾತನಾಡಿದ ಬಿಜೆಪಿ ಶಾಸಕ ಚನ್ನಬಸಪ್ಪ, ಮನೆ ಮನೆಯಲ್ಲಿ ಹಿಂದುತ್ವ ಮತ್ತು ಆರ್​​ಎಸ್​​ಎಸ್ ಬೆರೆತು ಹೋಗಿದೆ. ಪ್ರಿಯಾಂಕ್​ ಖರ್ಗೆ ಇಂತಹ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಅಶ್ವತ್ ನಾರಾಯಣ್, ಕಾರ್ಯಕರ್ತರ ಮೇಲೆ ಕೇಸ್​ ದಾಖಲಾಗಿದೆ ಎಂದು ಚನ್ನಬಸಪ್ಪ ವಾಗ್ದಾಳಿ ನಡೆಸಿದರು. : – - – - -