ಸಿದ್ಧರಾಮಯ್ಯ ಐದು ವರ್ಷ ಸಿಎಂ ಎಂಬ ಎಂ.ಬಿ ಪಾಟೀಲ್ ಹೇಳಿಕೆ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ಹೀಗಿತ್ತು..? ಬೆಂಗಳೂರು,ಮೇ,23,2023(..):ಐದು ವರ್ಷವೂ ಸಿದ್ಧರಾಮಯ್ಯ ಸಿಎಂ ಎಂಬ ಸಚಿವ ಎಂ.ಬಿ ಪಾಟೀಲ್ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಾನು ಯಾರೊಬ್ಬರ ಹೇಳಿಕೆಗೂ ಪ್ರತಿಕ್ರಿಯೆ ನೀಡಲ್ಲ. ಯಾರು ಏನೇ ಹೇಳಿಕೆ ಕೊಡಲಿ ಅದನ್ನ ಎಐಸಿಸಿ ನೋಡಿಕೊಳ್ಳಲಿದೆ ಎಂದು ತಿಳಿಸಿದರು. ಸ್ಪೀಕರ್ ಸ್ಥಾನಕ್ಕೆ ಶಾಸಕ ಯುಟಿ ಖಾದರ್ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಹೊಸಮುಖ, ಯುವಕರಿಗೆ ಕೊಡಬೇಕೆಂದು ಈ ತೀರ್ಮಾನವಾಗಿದೆ. ಯುಟಿ ಖಾದರ್ ತುಂಬಾ ಜ್ಞಾನಿ ಇದ್ದಾರೆ. ಹಾಗಾಗಿ ಸ್ಪೀಕರ್ ಹುದ್ದೆ ನೀಡಲಾಗಿದೆ ಎಂದರು ಹೇಳಿದರು. : - - – -