ಸಚಿವ ಎಂ.ಬಿ ಪಾಟೀಲ್ ಗೆ ನೇರ ಎಚ್ಚರಿಕೆ ನೀಡಿದ ಸಂಸದ ಡಿ.ಕೆ ಸುರೇಶ್ ಬೆಂಗಳೂರು,ಮೇ,23,2023(..):ಐದು ವರ್ಷವೂ ಸಿದ‍್ಧರಾಮಯ್ಯ ಸಿಎಂ ಎಂಬ ಹೇಳಿಕೆ ವಿಚಾರ ಕುರಿತು ಸಚಿವ ಎಂ.ಬಿ ಪಾಟೀಲ್ ಗೆ ಸಂಸದ ಡಿ.ಕೆ ಸುರೇಶ್ ನೇರ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಸುರೇಶ್, ​ ಎಂ.ಬಿ.ಪಾಟೀಲ್​ ಹೇಳಿಕೆಗೆ ತೀಕ್ಷ್ಣವಾಗಿ ಉತ್ತರ ಕೊಡಬಲ್ಲೆ, ಎಚ್ಚರಿಕೆ ಕೊಡಬಲ್ಲೆ. ಆದರೆ ಈಗಲೇ ಅದೆಲ್ಲ ಬೇಡ. ಎಂ.ಬಿ.ಪಾಟೀಲ್​ಗೆ ಹೇಳಿ, ಇದೆಲ್ಲ ಬೇಡ ಅಂತಾ. ಎಂ.ಬಿ.ಪಾಟೀಲ್ ​ಗೆ ಹೆಚ್ಚಿನ ಮಾಹಿತಿ ಬೇಕು ಅಂದ್ರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಬಳಿ ಮಾತನಾಡಲಿ ಎಂದು ಕಿಡಿಕಾರಿದರು. : - – - -