ಮುಡಾ ಅಕ್ರಮ ಕುರಿತು ಸಿಬಿಐ ಅಥವಾ ಲೋಕಾಯುಕ್ತ ತನಿಖೆಯಾಗಲಿ- ಆರ್. ಅಶೋಕ್ ಮಂಡ್ಯ,ಆಗಸ್ಟ್,22,2024 (..):ಮುಡಾದಲ್ಲಿ ನಡೆದ ಅಕ್ರಮ ಹಗರಣವನ್ನ ಸಿಬಿಐ ಅಥವಾ ಲೋಕಾಯುಕ್ತ ತನಿಖೆಗೆ ನೀಡಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಭ್ರಷ್ಟಾಚಾರಿ ಭ್ರಷ್ಟಾಚಾರದ ವಿರುದ್ದ ನಮ್ಮ ಹೋರಾಟ ಜಾತಿ ವಿರುದ್ದ ಅಲ್ಲ. ಕಾಂಗ್ರೆಸ್ ನವರು ಈಗ ಜಾತಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಈಗ ಮುಡಾ ಹಗರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯ ಜಾತಿ ಹೆಸರು ಬಳಸುತ್ತಿದ್ದಾರೆ ಎಂದು ಕಿಡಿಕಾರಿದರು. ಈಗ ಒಂದಾದ ಮೇಲೆ ಒಂದು ವಿಚಾರ ಬರುತ್ತಿದೆ. ಮೊದಲು ನಾವು ಸೈಟ್ ಗೆ ಅರ್ಜಿ ಹಾಕಿಲ್ಲ ಎಂದರು ಈಗ ಪತ್ರದಲ್ಲಿ ವೈಟ್ನರ್ ಹಾಕಿರೋದು ಪತ್ತೆಯಾಗಿದೆ. ವಿಜಯನಗರದಲ್ಲಿ ಸೈಟ್ ಬೇಕೆಂದು ಪತ್ರ ಬರೆದಿದ್ದರು. ಅದಕ್ಕೆ ವೈಟ್ನರ್ ಹಾಕಿದ್ದಾರೆ. ಮುಡಾ ದಾಖಲೆಗಳನ್ನ ತಿದ್ದಿದ್ದಾರೆ. ದೊಡ್ಡ ದೊಡ್ಡ ತಿಮಿಂಗಿಲಗಳು ಈ ಪ್ರಕರಣದಲ್ಲಿ ಇವೆ. ಮುಡಾ ಅಕ್ರಮ ಬಗ್ಗೆ ಸಿಬಿಐ ಅಥವಾ ಲೋಕಾಯುಕ್ತ ತನಿಖೆಯಾಗಲಿ ಎಂದು ಆರ್.ಅಶೋಕ್ ಒತ್ತಾಯಿಸಿದರು. : , , , , .