ಶೌಚಾಲಯಕ್ಕೆ ತೆರಳಿದ್ದ ವ್ಯಕ್ತಿ ವೃಷಣಗಳ ಕಚ್ಚಿ ಹಿಡಿದ ಪೈಥಾನ್..!‌ ಥಾಯ್ಲೆಂಡ್‌, ಆ.22,2024: (..) ಶೌಚಕ್ಕೆ ತೆರಳಿದ್ದ ವ್ಯಕ್ತಿಯ ವೃಷಣಗಳನ್ನು ಕಮೋಡ್ ನಲ್ಲಿ ಅಡಗಿದ್ದ ಹಾವೊಂದು ಕೆಲ ಕಾಲ ಬಿಗಿಯಾಗಿ ಕಚ್ಚಿ ಹಿಡಿದ ಆಘಾತಕಾರಿ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಥಾನಾತ್ ತಂಗ್ಟೆವಾನಾನ್ ಎಂಬುವವರೇ ಹಾವಿನ ದಾಳಿಗೆ ತುತ್ತಾಗಿ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾದವರು. “ ಮೇಲ್ ಆನ್‌ಲೈನ್” ನ್ಯೂಸ್‌ ಪೋರ್ಟಲ್‌ ವರದಿ ಪ್ರಕಾರ, 12 ಅಡಿ ಉದ್ದದ ಹೆಬ್ಬಾವೊಂದು ಅವರ ನಿವಾಸ ಕಮೋಡ್‌ ನಲ್ಲಿ ಅಡಗಿತ್ತು. ಈ ಬಗ್ಗೆ ಮಾಹಿತಿ ಇರದ ಥಾನಾತ್‌ ತಂಗೈವಾನಾನ್‌, ಮಾಮೂಲಿಯಂತೆ ಶೌಚಾಲಯಕ್ಕೆ ತೆರಳಿದ್ದಾರೆ. ಕಮೋಡ್‌ ಮೇಲೆ ಕುಳಿತುಕೊಂಡ ತಕ್ಷಣ ವೃಷಣಗಳಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿತು. ‘ನನ್ನ ವೃಷಣಗಳನ್ನು ಏನೋ ಕಚ್ಚುತ್ತಿದೆ ಎಂದು ನಾನು ಭಾವಿಸಿದೆ. ಇದು ತುಂಬಾ ನೋವಿನಿಂದ ಕೂಡಿತ್ತು. ಯಾಕೆ ಹೀಗಾಗುತ್ತಿದೆ ಎಂದು ನೋಡಲು ಕಮೋಡ್‌ ಗೆ ಕೈ ಹಾಕಿದೆ. ಆಗ ನನ್ನ ಕೈಗೆ ಹಾವು ಸಿಕ್ಕಿತು. ಇದರಿಂದ ಕೆಲ ಕ್ಷಣ ನಾನು ತೀವ್ರ ಆಘಾತಕ್ಕೊಳಗಾದೆ. ನಂತರ ಸಾವರಿಸಿಕೊಂಡ ಥಾನತ್, ಟಾಯ್ಲೆಟ್ ಬ್ರಷ್ ಅನ್ನು ಎತ್ತಿಕೊಂಡು ಹಾವು ಸಾಯುವವರೆಗೂ ಹೊಡೆದರು ಎಂದು ವರದಿ ತಿಳಿಸಿದೆ. : , , ,,12- . : , 12- . . , : ‘ . , . ’. .