ಸಿದ್ದರಾಮಯ್ಯ ಸಿಎಂ ಆಗುವುದು ಬಹುತೇಕ ಖಚಿತ: ಹುಟ್ಟೂರು ಸಿದ್ಧರಾಮನಹುಂಡಿಯಲ್ಲಿ ಸಂಭ್ರಮಾಚರಣೆ. ಮೈಸೂರು,ಮೇ,17,2023(..): ರಾಜ್ಯ ವಿಧಾನಸಭೆ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದು ನಾಲ್ಕು ದಿನಗಳು ಕಳದರೂ ಕಗ್ಗಂಟಾಗಿದ್ದ ಸಿಎಂ ಆಯ್ಕೆ ವಿಚಾರಕ್ಕೆ ಇಂದು ಕಾಂಗ್ರೆಸ್ ಹೈಕಮಾಂಡ್ ತೆರೆ ಎಳೆಯಲಿದ್ದು ಇಂದೇ ನೂತನ ಸಿಎಂ ಹೆಸರು ಘೋಷಣೆ ಮಾಡಲಿದೆ. ಸಿದ್ಧರಾಮಯ್ಯ ರಾಜ್ಯದ ನೂತನ ಸಿಎಂ ಆಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಕಾಂಗ್ರೆಸ್ ರಾಹುಲ್ ಗಾಂಧಿ ಅವರ ಜೊತೆ ಸಿದ್ಧರಾಮಯ್ಯ ಚರ್ಚಿಸಿ ತೆರಳಿದ್ದಾರೆ. ಈ ವೇಳೆ ಸಿಎಂ ಸ್ಥಾನವನ್ನ ಮತ್ತೊಮ್ಮೆ ಸಮರ್ಥವಾಗಿ ನಿಭಾಯಿಸಿ ಎಂದು ರಾಹುಲ್ ಗಾಂಧಿ ಶುಭಕೋರಿದ್ದಾರೆ ಎನ್ನಲಾಗಿದೆ. ಈ ನಡುವೆ ಸಿದ್ದರಾಮಯ್ಯ ಸಿಎಂ ಆಗುವುದು ಖಚಿತ ಎಂದು ಗೊತ್ತಾದ ಬೆನ್ನಲ್ಲೆ ಅವರ ಹುಟ್ಟೂರು ವರುಣಾಕ್ಷೇತ್ರದ ಸಿದ್ಧರಾಮನಹುಂಡಿಯಲ್ಲಿ ಸಂಭ್ರಮ ಮನೆ ಮಾಡಿದೆ. ಸಿದ್ಧರಾಮಯ್ಯ ಅವರ ಭಾವಚಿತ್ರದ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿ ಗ್ರಾಮಸ್ಥರಿಂದ ಸಂಭ್ರಮಾಚರಣೆ ಮಾಡಿದ್ದಾರೆ. : - - - – .