ಬಿಜೆಪಿ ಸೋಲಿಗೆ ನಳಿನ್ ಕುಮಾರ್ ಕಟೀಲು, ಬಿ.ಎಲ್​.ಸಂತೋಷ್ ಹೊಣೆಗಾರರಲ್ಲ- ಬಿವೈ ವಿಜಯೇಂದ್ರ. ತುಮಕೂರು,ಮೇ,15,2023(..):ಬಿಜೆಪಿ ಸೋಲಿಗೆ ಕಟೀಲು, ಬಿ.ಎಲ್​.ಸಂತೋಷ್ ಹೊಣೆಗಾರರಲ್ಲ ಎಂದು ಮಠದಲ್ಲಿ ಶಿಕಾರಿಪುರ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಇಂದು ಮಾತನಾಡಿದ ಬಿ.ವೈ.ವಿಜಯೇಂದ್ರ, ಬಿಎಸ್​ ಯಡಿಯೂರಪ್ಪ ಗಟ್ಟಿ ಇದ್ದಾರೆ. ಪಕ್ಷವನ್ನು ಮತ್ತೆ ಸಂಘಟನೆ ಮಾಡಲಿದ್ದಾರೆ. ಬಿಜೆಪಿ ನಾಯಕರು ಸೋಲಿನ ಬಗ್ಗೆ ಅವಲೋಕನ ಮಾಡಲಿದ್ದಾರೆ. ಪಕ್ಷದ ಹಿನ್ನಡೆಗೆ ಸಾಕಷ್ಟು ಕಾರಣಗಳಿವೆ, ಇದರ ಬಗ್ಗೆ ಚರ್ಚಿಸುತ್ತೇವೆ ಎಂದು ತಿಳಿಸಿದರು. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಬಿಜೆಪಿ 66 ಜೆಡಿಎಸ್ 19 ಸ್ಥಾನಗಳನ್ನ ಪಡೆದಿವೆ. ಈ ನಡುವೆ ಬಿಜೆಪಿಯ ಈ ಪರಿಸ್ಥಿತಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಬಿಎಲ್ ಸಂತೋಷ್ ಹೊಣೆಗಾರರು ಎಂದು ಆರೋಪಿಸಲಾಗಿತ್ತು. : - - – - - .