ಮಾಜಿ ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಸೂತಕ: ಗೆಲುವಿನ ಸಂಭ್ರಮ ಕಳೆದುಕೊಂಡ ಕುಟುಂಬ. ಮೈಸೂರು,ಮೇ,13,2023(..):ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು ಕಾಂಗ್ರೆಸ್ ಬಹುಮತದತ್ತ ಸಾಗುತ್ತಿದೆ. ಈ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಹೌದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಭಾವ ನಿಧನರಾಗಿದ್ದಾರೆ. ಸಿದ್ಧರಾಮಯ್ಯ ಸ್ವಂತ ಸಹೋದರಿ ಶಿವಮ್ಮ ಅವರ ಪತಿ‌ ರಾಮೇಗೌಡ (69) ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಾಮೇಗೌಡರು ಸಿದ್ದರಾಮನಹುಂಡಿಯಲ್ಲಿ ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದರು. ಪತ್ನಿ, ಮೂವರು ಹೆಣ್ಣು ಮಕ್ಕಳು, ಓರ್ವ ಮಗನನ್ನ ಅಗಲಿದ್ದಾರೆ. ಸಂಜೆ ವೇಳೆಗೆ ಸಿದ್ದರಾಮನಹುಂಡಿಯಲ್ಲಿ ರಾಮೇಗೌಡರ ಅಂತ್ಯಕ್ರಿಯೆ ನೆರವೇರಲಿದೆ. : -- ----