ವರಮಹಾಲಕ್ಷ್ಮಿ ʼ ಸೆಲ್ಫಿ ಸ್ಪರ್ಧೆ” ವಿಜೇತರಿಗೆ ಬಹುಮಾನ ವಿತರಣೆ . ಮೈಸೂರು, ಆ.21,2024:(..) ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಮಹಿಳೆಯರಿಗಾಗಿ ಆಯೋಜಿಸಿದ ಆನ್ಲೈನ್ ವರಮಹಾಲಕ್ಷ್ಮಿ ಸೆಲ್ಫಿ ಸ್ಪರ್ಧೆಯಲ್ಲಿ 250ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು ಅತ್ಯುತ್ತಮ ಸೆಲ್ಫಿ ಚಿತ್ರಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಮಾನುಜಾ ರಸ್ತೆಯಲ್ಲಿರುವ ನಮೋ ಯೋಗ ಭವನದಲ್ಲಿ ವಿಜೇತರಾದ ರಿಷು ಪುರುಷೋತ್ತಮ್, ಪ್ರಮೀಳಾ ರಾಧಾಕೃಷ್ಣ, ಎಚ್ ಎಸ್ ಪ್ರೇಮಾವತಿ, ಗಾಯಿತ್ರಿ ಜಿ, ಚೈತ್ರ ಗುರುದತ್, ಹರ್ಷಿತ, ರೂಪಶ್ರೀ, ವಿಜಯಲಕ್ಷ್ಮಿ, ಕಲಾ, ಶೃತಿ, ಸುಧಾಬಾಯಿ, ಶಿಲ್ಪ ಅರುಣ್, ಹರ್ಷಿಣಿ ವಿಜಯ್, ನೇತ್ರಾವತಿ ಯಶವಂತ್ ಕುಮಾರ್, ಪ್ರೀತಿ ವಿನಯ್ ಅವರಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಸಿ , ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯ ಮ ವಿ ರಾಮಪ್ರಸಾದ್, ಸಮೃದ್ಧಿ ಪತ್ರಿಕೆಯ ಸಹನಾ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಚಿದನ್ವಿ ಟ್ರಸ್ಟ್ ಅಧ್ಯಕ್ಷ ನಾಗಮಣಿ, ಅಥರ್ವ ಸ್ಕಿಲ್ ಫೌಂಡೇಶನ್ ಅಧ್ಯಕ್ಷೆ ಪುಷ್ಪ, ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ,ಸಚಿಂದ್ರ, ಚಕ್ರಪಾಣಿ, ಹಾಗೂ ಇನ್ನಿತರರು ಭಾಗವಹಿಸಿದ್ದರು. : , ‘ ’, , .