ಮತಯಂತ್ರಗಳನ್ನ ಒಡೆದು ಪುಡಿಪುಡಿ ಮಾಡಿದ ಗ್ರಾಮಸ್ಥರು: ಆತಂಕದ ವಾತಾವರಣ ನಿರ್ಮಾಣ. ವಿಜಯಪುರ, ಮೇ,10,2023(..):ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಗ್ರಾಮಸ್ಥರು ಮತಯಂತ್ರಗಳನ್ನ ಒಡೆದು ಪುಡಿ ಪುಡಿ ಮಾಡಿರುವ ಘಟನೆ ನಡೆದಿದೆ. ಕಾಯ್ದಿರಿಸಿದ್ದ ವಿಎಂ ವಿವಿ ಪ್ಯಾಟ್ ಮಷೀನ್ ಅನ್ನು ಚುನಾವಣಾಧಿಕಾರಿಗಳು ಕೊಂಡೊಯ್ಯುತ್ತಿದ್ದರು. ಈ ವೇಳೆ ಮತದಾನ ಪ್ರಕ್ರಿಯೆ ಅರ್ಥಕ್ಕೆ ಸ್ಥಗಿತಗೊಳಿಸಿದ್ದಾರೆಂದು ತಪ್ಪಾಗಿ ಭಾವಿಸಿ ಗ್ರಾಮಸ್ಥರು ದಾಳಿ ನಡೆಸಿದ್ದು, ಮತಯಂತ್ರಗಳು ವಿವಿ ಪ್ಯಾಟ್ ಗಳನ್ನ ಪುಡಿಪುಡಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಚುನಾವಣಾಧಿಕಾರಿಗಳ ಕಾರು ಜಖಂಗೊಳಿಸಿ ಚುನಾವಣಾಧಿಕಾರಿಗಳು ಸಿಬ್ಬಂದಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. : - - – .