ನಾನು ಬಿಜೆಪಿಯ ಸ್ಟಾರ್ ಪ್ರಚಾರಕ: ನನ್ನ ಸಲುವಾಗಿಯೇ 4 ದಿನ ಹೆಲಿಕಾಪ್ಟರ್ ನಿಂತಿದ್ದವು-ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ವಿಜಯಪುರ,ಮೇ,2023(..):ನಾನು ಬಿಜೆಪಿಯ ಸ್ಟಾರ್ ಪ್ರಚಾರಕ. ನನ್ನ ಸಲುವಾಗಿಯೇ 4 ದಿನ ಹೆಲಿಕಾಪ್ಟರ್ ನಿಂತಿದ್ದವು ಎನ್ನುವ ಮೂಲಕ ಮಾಜಿ ಸಚಿವ ಎಂ.ಬಿ ಪಾಟೀಲ್ ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದರು. ನಗರದಲ್ಲಿ ಕೊನೆಯ ಹಂತದ ಪ್ರಚಾರ ‌ನಡೆಸಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ನೀವು ನಾಟಕ ಮಾಡಿ, ವಿಜಯಪುರ ನಗರದಲ್ಲಿ ನಿಮ್ಮ ನಾಟಕ ಮಾಡಬೇಡಿ. ನೀವು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷನಾಗಿರಬಹುದು, ನಾನು ರಾಜ್ಯ ಬಿಜೆಪಿಯ ಸ್ಟಾರ್ ಪ್ರಚಾರಕ. ನನ್ನ ಸಲುವಾಗಿಯೇ 4 ದಿನಗಳ ಕಾಲ ಹೆಲಿಕಾಪ್ಟರ್​​ಗಳು ನಿಂತಿದ್ದವು. ಬಿಜೆಪಿಯ 30 ಸ್ಟಾರ್ ಪ್ರಚಾರಕರಲ್ಲಿ ನಾನೂ ಒಬ್ಬ ಅನ್ನೋದು ತಿಳಿದುಕೊಂಡಿರಿ ಎಂದು ವಾಗ್ದಾಳಿ ನಡೆಸಿದರು. ಎನ್ನುವ ಮೂಲಕ ಹರಿಹಾಯ್ದಿದ್ದಾರೆ. ಇದೇ ವೇಳೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ವಿರುದ್ದ ಪರೋಕ್ಷ ಕಿಡಿಕಾರಿದ ಎಂಬಿ ಪಾಟೀಲ್, ನನ್ನ ಸೋಲಿಸೋಕೆ 2 ಕೋಟಿ ಹಣಕಾಸಿನ , 5555 ನಂಬರ್ ಕಾರ್ ತಗೊಂಡಿದ್ದಾನೆ. ಇದೀಗ ಹೊಲಸು ಮುಖ ತಗೊಂಡು ನಾಗಠಾಣ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾನೆ. ಮುಖಕ್ಕೆ ಪೇರ್ ಆಂಡ್ ಲವ್ಲಿನಾದರೂ ಹಚ್ಕೋ ಎಂದು ಯತ್ನಾಳ್ ಗುಡುಗಿದರು. : –- - .